ಕಾಬೂಲ್: ಅಪ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಪೈಶಾಚಿಕ ಕೃತ್ಯಗಳು ನಿಲ್ಲುತ್ತಲೇ ಇಲ್ಲ. ಒಂದಾದ ಮೇಲೊಂದರಂತೆ ತಾಲಿಬಾನಿಗಳ ಕ್ರೂರತ್ವ ತೋರ್ಪಡಿಸುವ ಘಟನೆಗಳು ಅಲ್ಲಿ ನಡೆಯುತ್ತಲೇ ಇವೆ.
ಈಗ ಅಂತದ್ದೇ ಇನ್ನೊಂದು ಘಟನೆ ನಡೆದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಂಗೀತಕ್ಕೆ ಅವಕಾಶವಿಲ್ಲ ಎಂದ ತಾಲಿಬಾನಿಗಳು ಸಂಗೀತಗಾರನನ್ನು ಎಳೆದಾಡಿ ಆತನ ಬಟ್ಟೆ ಹರಿದಿದ್ದಾರೆ. ಹಾಗೂ ಆತ ನುಡಿಸುತ್ತಿದ್ದ ವಾದ್ಯ ಕಸಿದು ಬೆಂಕಿ ಹಚ್ಚಿದ್ದಾರೆ. ಹಾಗೂ ಅದನ್ನೆಲ್ಲ ನೋಡಿ ಗಹಗಹಿಸಿ ನಕ್ಕಿದ್ದಾರೆ. ಈ ವೇಳೆ ಅಸಹಾಯಕನಾದ ಸಂಗೀತಗಾರ ಕಣ್ಣೀರಿಟ್ಟಿದ್ದಾರೆ.
ಈ ವಿಡಿಯೋವನ್ನು ಅಪ್ಘನ್ ಪತ್ರಕರ್ತ ಅಬ್ದುಲ್ ಹಕ್ ಒಮೇರಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
PublicNext
16/01/2022 05:44 pm