ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರು ಕೆಲವು ಉದ್ಯಮಿಗಳಿಂದ ಭಾರಿ ಮೊತ್ತದ ಹಣ ಪಡೆದು ಮೋಸ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ದೂರು ಕೂಡ ದಾಖಲಾಗಿದ್ದು, ಇದರಿಂದ ಶಿಲ್ಪಾ ಶೆಟ್ಟಿ ಕುಟುಂಬ ಮತ್ತೆ ಕಷ್ಟಕ್ಕೆ ಸಿಲುಕಿದೆ.
ಎಲ್ಲರಿಗೂ ಗೊತ್ತಿರುವಂತೆ ಶಿಲ್ಪಾ ಶೆಟ್ಟಿ ಅವರು ಫಿಟ್ನೆಸ್ ವಿಚಾರದಲ್ಲಿ ತಜ್ಞರಾಗಿದ್ದಾರೆ. ಇತರರಿಗೂ ಅವರು ಯೋಗ ಹೇಳಿಕೊಡುತ್ತಾರೆ. ತಮ್ಮದೇ ಫಿಟ್ನೆಸ್ ಕೇಂದ್ರಗಳನ್ನು ಹೊಂದಿರುವ ಅವರು, ದೇಶದ ಬೇರೆ ಬೇರೆ ನಗರದಲ್ಲಿ ಕೂಡ ಅದರ ಶಾಖೆ ಆರಂಭಿಸಲು ಆಸಕ್ತಿ ತೋರಿಸಿದ್ದರು. ಅದಕ್ಕಾಗಿ ಕೆಲವು ಉದ್ಯಮಿಗಳಿಂದ 1.5 ಕೋಟಿ ರೂ. ಹಣ ಪಡೆದಿದ್ದರು. ಆದರೆ ಈಗ ಫಿಟ್ನೆಸ್ ಕೇಂದ್ರವನ್ನೂ ಆರಂಭಿಸಿಲ್ಲ, ಹಣವನ್ನೂ ವಾಪಸ್ ನೀಡಿಲ್ಲ ಎಂದು ಉದ್ಯಮಿಗಳು ಆರೋಪಿಸಿದ್ದಾರೆ. ಈ ಸಂಬಂಧ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಕೇಸ್ ದಾಖಲಿಸಿದ್ದಾರೆ.
PublicNext
14/11/2021 04:15 pm