ಅಭಿನಯ ಚಕ್ರವರ್ತಿ ಸುದೀಪ್ ನಟನೆಯ ಕೋಟಿಗೊಬ್ಬ 3 ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ಆದರೆ ಕೋಟಿಗೊಬ್ಬ 3 ಸಿನಿಮಾ ರಿಲೀಸ್ಗೂ ಮುನ್ನವೇ ಪೈರಸಿ ಕಾಟ ಶುರುವಾಗಿದೆ. ಕೊರೊನಾದಿಂದಾಗಿ ಚಿತ್ರಮಂದಿರ ಬಾಗಿಲು ಹಾಕಿದ್ದರಿಂದ ಅನುಭವಿಸಿದ ಕಷ್ಟ ಒಂದೆಡೆಯಾದರೆ ಈಗ ಎಲ್ಲವೂ ಸರಿಯಾದ ಮೇಲೆ ಪೈರಸಿಯ ಕಾಟ ಕೋಟಿಗೊಬ್ಬ ಚಿತ್ರತಂಡಕ್ಕೆ ತಲೆನೋವು ತಂದಿದೆ.
ಇನ್ನು ಪೈರಸಿ ಕುರಿತು ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಗೃಹ ಸಚಿವ ಆರಗ ಜ್ಞಾನೇಂದ್ರಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಚಿತ್ರವನ್ನ ಪೈರಸಿ ಮಾಡೋದಾಗಿ ಸೂರಪ್ಪಬಾಬುಗೆ ಟೆಲಿಗ್ರಾಂನಲ್ಲಿ ಬೆದರಿಕೆ ಸಂದೇಶಗಳು ಬರರುತ್ತಿವೆ ಈ ಮೂಲಕ ಬ್ಲಾಕ್ ಮೈಲ್ ಮಾಡಲಾಗುತ್ತಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅ.14ರಂದು ರಿಲೀಸ್ ಆಗಲಿರೋ ಕೋಟಿಗೊಬ್ಬ-3 ಚಿತ್ರ ಮುನ್ನೆಚ್ಚರಿಕೆ ಕ್ರಮವಾಗಿ ಸೈಬರ್ ಕ್ರೈಂ ಮೊರೆ ಹೋಗಿರುವುದು ವಿಪರ್ಯಾಸ.
PublicNext
29/09/2021 04:54 pm