ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ-ಮನೆ ಛಾವಣಿಗೆ ತಗಡು ಹಾಕುವಾಗ ವಿದ್ಯುತ್ ಅವಘಡ: ಇಬ್ಬರ ದುರ್ಮರಣ

ಬೆಳಗಾವಿ: ಸತತವಾಗಿ ಮಳೆಗೆ ಮನೆ ಸೋರುತ್ತಿದೆ ಎಂದು ಮನೆಯ ಮೇಲ್ಛಾವಣಿಗೆ ತಗಡಿನ ಪತ್ರಾಗಳನ್ನು ಹಾಕುವಾಗ ಆಕಸ್ಮಿಕವಾಗಿ ತಗಡಿನ ಪತ್ರಗಳು ವಿದ್ಯುತ್ ತಂತಿ ತಗುಲಿ ಇಬ್ಬರು ಸ್ಥಳದಲ್ಲಿ ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ನಡೆದಿದೆ. ಇವರ ಸಹಾಯಕ್ಕಾಗಿ ಹೋಗಿದ್ದ ಇನ್ನೋರ್ವನ ಸ್ಥಿತಿ ಚಿಂತಾಜನವಾಗಿದ್ದು ಆತನನ್ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿನಾಯಕ ಕಲಖಾಂಬಕರ(25), ಹಾಗೂ ವಿಲಾಸ ಅಗಸಗೇಕರ್(57) ಮೃತಪಟ್ಟವರು ಎಂದು ತಿಳಿದು ಬಂದಿದೆ.

ಹೌದು ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ವಿನಾಯಕ ಅವರ ಮನೆ ಸೋರುತ್ತಿತ್ತು. ಅದಕ್ಕಾಗಿ ಅವರು ಮನೆಯ ಮೇಲಿರುವ ಮಾಳಿಗೆಗೆ ತಗಡಿನ ಪತ್ರಾಗಳನ್ನು ಹಾಕಲು ವಿನಾಯಕ ಮತ್ತು ವಿಲಾಸ ಮುಂದಾಗಿದ್ದರು. ಈ ವೇಳೆ ಪತ್ರಾಗಳು ಮನೆಯ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳಿಗೆ ಪತ್ರಾಗಳು ಸಿಲುಕಿಕೊಂಡು ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.

ಈ ವಿದ್ಯತ್ ಅವಘಡದಿಂದ ಇವರಿಬ್ಬರನ್ನು ರಕ್ಷಿಸಲು ಹೋಗಿದ್ದ ಸ್ಥಳೀಯನೊಬ್ಬ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾರೆ. ಇದೀಗ ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಕಾಕತಿ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜೀವಗಳನ್ನ ಕಳೆದುಕೊಂಡ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.

Edited By : Nagaraj Tulugeri
PublicNext

PublicNext

06/09/2022 09:51 am

Cinque Terre

50.83 K

Cinque Terre

4

ಸಂಬಂಧಿತ ಸುದ್ದಿ