ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರಟಗೆರೆ: ಬೀದಿನಾಯಿ ದಾಳಿ ತೀವ್ರ ಅಸ್ವಸ್ಥಗೊಂಡ ಮಗು

ಕೊರಟಗೆರೆ: ಆಟವಾಡುತ್ತಿದ್ದ ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಪರಿಣಾಮ ಮಗುವನ್ನು ತೀವ್ರವಾಗಿ ಗಾಯಗೊಂಡಿದ್ದು ಮಗುವಿನ 4 ಹಲ್ಲುಗಳು ಕಿತ್ತು ಬರುವಂತಾಗಿವೆ. ಈ ಘಟನೆ ನಿನ್ನೆ ಬುಧವಾರ ಸಂಜೆ ವರದಿಯಾಗಿದೆ.

ಕೊರಟಗೆರೆ ತಾಲೂಕಿನ ತೋವಿನಕೆರೆ ಹೋಬಳಿಯ ಸೂರೇನ ಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶರೀಫ್ ಅಹಮದ್ ಪುತ್ರಿ 4 ವರ್ಷದ ಅರ್ಫಾ ಮೊಹಮ್ಮದಿ ಗಾಯಗೊಂಡಿರುವ ಮಗುವಾಗಿದ್ದು ತುಂಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ತುಮಕೂರಿನ ಮಡಿಲು ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನಾದರೂ ಅಧಿಕಾರಿಗಳು ಬೀದಿನಾಯಿಗಳು ಉಪಟಳಕ್ಕೆ ಬ್ರೇಕ್ ಮುಂದೆ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಬೇಕಿದೆ.

Edited By : Nagaraj Tulugeri
PublicNext

PublicNext

28/07/2022 01:55 pm

Cinque Terre

38.19 K

Cinque Terre

1

ಸಂಬಂಧಿತ ಸುದ್ದಿ