ಬೆಂಗಳೂರು: ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ 24 ವರ್ಷದ ಯುವಕ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದ. ಇದೀಗ ಆತನ ಶವ ಪತ್ತೆಯಾಗಿದೆ.
ಮೃತ ಯುವಕನನ್ನು ಶಿವಮೊಗ್ಗ ಮೂಲದ ಮಿಥುನ್ ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ಸುರಿದ ಮಳೆಗೆ ಈತ ಕೆಆರ್ ಪುರಂನ ಎಸ್‌ಆರ್ ಲೇಔಟ್ ಬಳಿಯ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದ. ಇದೀಗ ಸತತ ಪ್ರಯತ್ನಗಳ ನಂತರ ಎಸ್‌ಡಿಆರ್‌ಎಫ್ ಸಿಬ್ಬಂದಿ ಶವವನ್ನು ಹೊರ ತೆಗೆದಿದ್ದಾರೆ. ಮೃತ ಮಿಥುನ್ ಕೆ.ಆರ್ ಪುರದ ಗಾಯತ್ರಿ ಬಡಾವಣೆಯ ನಿವಚಾಸಿಯಾಗಿದ್ದಾನೆ. ಶುಕ್ರವಾರ ರಾತ್ರಿ ಬಡವಾಣೆಯಲ್ಲಿ ಮಳೆ ನೀರು ಸಂಪೂರ್ಣವಾಗಿ ಅವರಿಸಿದ್ದರಿಂದ ಆತನಿದ್ದ ಕಟ್ಟಡದ ಬಳಿ ಕಾಂಪೌಂಡ್ ಬಿದ್ದಿತು. ಈ ವೇಳೆ ಮಿಥುನ್ ಬೈಕ್ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿತ್ತು. ಹೀಗಾಗಿ ಬೈಕ್ ರಕ್ಷಣೆ ಮುಂದಾದಾಗ ಮಿಥುನ್ ಕೂಡ ನೀರಿನ ಜೊತೆ ಕೊಚ್ಚಿಕೊಂಡು ಹೋಗಿದ್ದ.
PublicNext
19/06/2022 10:51 am