ಲಕ್ನೋ: ಬೊಲೆರೋ ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿ ಮಕ್ಕಳು, ಮಹಿಳೆಯರು ಸೇರಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಕಾಸ್ಗಂಜ್ ಜಿಲ್ಲೆಯ ದರಿಯಾಗಂಜ್ ಸಮೀಪದ ಬದೌನ್-ಮೈನ್‌ಪುರಿ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ. ಫರೂಖಾಬಾದ್ ಪ್ರದೇಶದ 10ಕ್ಕೂ ಹೆಚ್ಚು ಭಕ್ತರು ಆಟೋದಲ್ಲಿ ಭೋಲೆ ಬಾಬಾನ ದರ್ಶನಕ್ಕೆ ತೆರಳುತ್ತಿದ್ದರು. ಬೊಲೆರೋದಲ್ಲಿ ಏಳು ಪ್ರಯಾಣಿಕರು ಫರೂಖಾಬಾದ್ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅಶೋಕಪುರ ಗ್ರಾಮದ ಬಳಿ ಎರಡು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ. ಬೊಲೆರೋ ಚಾಲಕ ಸೇರಿದಂತೆ ಆಟೋದಲ್ಲಿದ್ದ 7 ಭಕ್ತಾದಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಎರಡೂ ವಾಹನಗಳಲಿದ್ದ ಪ್ರಯಾಣಿಕರು ಫರೂಕಾಬಾದ್‌ನ ನಿವಾಸಿಗಳು. ಈ ಘಟನೆಯಲ್ಲಿ ಗಾಯಗೊಂಡವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಕುಟುಂಬಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ.
PublicNext
03/05/2022 03:48 pm