ಚಂಡೀಗಢ : ಪಂಜಾಬ್ ನ ಅಮೃತಸರದಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಕೇಂದ್ರ ಕಚೇರಿಯಲ್ಲಿ ಗುಂಡಿನ ದಾಳಿ ನಡೆದಿದ್ದು 5 ಯೋಧರು ಹುತಾತ್ಮರಾಗಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಬಿಎಸ್ ಎಫ್ ಶಿಬಿರದೊಳಗೆ ಯೋಧ ಮನಬಂದಂತೆ ಗುಂಡು ಹಾರಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ಖಾಸಾದಲ್ಲಿರುವ ಬಿಎಸ್ ಎಫ್ ಕೇಂದ್ರ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಏಕಾಏಕಿ ಆಕ್ರೋಶಿತನಾದ ಕಾನ್ಸ್ಟೇಬಲ್ ನ ಹೀಗೆ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
144 ಬಿಎನ್ ಹೆಡ್ ಕ್ವಾರ್ಟರ್ಸ್ ನ ಮೆಸ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಗುಂಡು ಹಾರಿಸಿದ ಜವಾನನ ಹೆಸರು ಸಿ. ಟಿ. ಸತ್ತಪ್ಪ ಎಸ್. ಗುಂಡಿನ ದಾಳಿಯ ವೇಳೆ ಯೋಧರು ಮೆಸ್ ನಲ್ಲಿ ಆಹಾರ ಸೇವಿಸುತ್ತಿದ್ದರು.
ಗುಂಡಿನ ಘಟನೆಯ ಸತ್ಯಾಸತ್ಯತೆ ತಿಳಿಯಲು ಸೇನಾ ಅಧಿಕಾರಿಗಳು ನ್ಯಾಯಾಲಯದ ವಿಚಾರಣೆಗೆ ಆದೇಶಿಸಿದ್ದಾರೆ.ಸ್ಥಳಕ್ಕೆ ಧಾವಿಸಿದ ಸೇನಾ ಅಧಿಕಾರಿಗಳು ಮತ್ತು ಪೊಲೀಸರು ಆಸ್ಪತ್ರೆಯಲ್ಲಿ, ಐವರು ಜವಾನರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಇದೇ ವೇಳೆ ಹತ್ತಕ್ಕೂ ಹೆಚ್ಚು ಸೈನಿಕರನ್ನು ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಯಿತು. ದಾಖಲಾದ ಯೋಧರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದೆ.
PublicNext
06/03/2022 04:48 pm