ಶಿಮ್ಲಾ: ರಸ್ತೆ ಅಪಘಾತದಲ್ಲಿ 56 ಜನ ಪ್ರವಾಸಿಗರು ಪವಾಡ ರೀತಿ ಬದುಕುಳಿದ ಘಟನೆ ಹಿಮಾಚಲ ಪ್ರದೇಶದ ಬೆಟ್ಟದ ಪ್ರದೇಶದಲ್ಲಿ ನಡೆದಿದೆ.
ಹಿಮಾಚಲ ಪ್ರದೇಶದ ಬೆಟ್ಟದ ಪ್ರದೇಶದಲ್ಲಿ ಗುಜರಾತ್‌ನ 56 ಜನರಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಜಾರಿತ್ತು. ಅದೃಷ್ಟವಶಾತ್ ಮರವೊಂದು ಬಸ್ ಅನ್ನು ತಡೆದ ಪರಿಣಾಮ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
PublicNext
13/11/2021 03:57 pm