ಚಿಕ್ಕಬಳ್ಳಾಪುರ : ಮನೆ ಮುಂದೆ ಆಟವಾಡುತ್ತಿದ್ದ ಮಗು ಮೇಲೆ ಕಾರು ಹತ್ತಿ ಮಗು ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿ ನಡೆದಿದೆ.
ಮೃತ ಮಗುವನ್ನು ಗ್ರೀತಿಕ್ (4) ಎಂದು ಗುರುತಿಸಲಾಗಿದೆ. ವೆಂಕಟೇಶ್ವರಲು ಮತ್ತು ಮೋನಿಶಾ ದಂಪತಿಗಳ ಪುತ್ರ ಗ್ರೀತಿಕ್ ರಸ್ತೆಯಲ್ಲಿ ಆಟವಾಡುತ್ತಿರುವಾಗ ಕಾರೊಂದು ಪಾರ್ಕಿಂಗ್ ಮಾಡಲು ಬಂದ ವೇಳೆ ಈ ದುರ್ಘಟನೆ ನಡೆದಿದೆ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನು ಮಗು ಮೇಲೆ ಕಾರು ಹತ್ತಿಸಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕಾರು ವಶಕ್ಕೆ ಪಡೆದ ಚಿಂತಾಮಣಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
29/09/2021 07:41 pm