ಶಿವಮೊಗ್ಗ: ರಾಜ್ಯದಲ್ಲಿ ನಿನ್ನೆ ರಾತ್ರಿ ನಡೆದ ಘಟನೆ ಜಿನಕ್ಕೂ ಭಯಂಕರವಾಗಿದೆ. ಹುಣಸೊಡು ಬಳಿಯ ಕಲ್ಲುಕ್ವಾರಿ ಮತ್ತು ಕ್ರಷರ್ ನಲ್ಲಿ ಸ್ಫೋಟಗೊಂಡದ್ದು ಜನರನ್ನು ಬೆಚ್ಚಿ ಬಿಳಿಸಿದೆ.
ರಾತ್ರಿ 10.30ರ ಸುಮಾರಿಗೆ ಸ್ಫೋಟದ ಶಬ್ದಕ್ಕೆ ಜನ ಶಾಕ್ ಆಗಿದ್ದಾರೆ. ಮಕ್ಕಳು, ಗರ್ಭಿಣಿಯರು, ಮಹಿಳೆಯರು ಸೇರಿದಂತೆ ಇಡೀ ಊರಿನ ಜನರೇ ಆತಂಕಗೊಂಡು ಮನೆಗಳಿಂದ ಹೊರ ಓಡಿದ್ದಾರೆ.
ಸ್ಫೋಟದ ತೀವ್ರತೆಗೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ಏನಾಗ್ತಿದೆ ಅನ್ನುವಷ್ಟರಲ್ಲಿ ದಟ್ಟಹೊಗೆ ಗಬ್ಬುವಾಸನೆ.
ಜಿಲೆಟಿನ್ ತುಂಬಿದ್ದ ಲಾರಿ ಸ್ಫೋಟಗೊಂಡು ಸುಟ್ಟುಕರಕಲಾಗಿದೆ. ಇಡೀ ಪ್ರದೇಶ ಬೆಂಕಿಯ ಕೆನ್ನಾಲಗೆಯಲ್ಲಿ ಹೊತ್ತಿ ಉರಿದಿದೆ.
ಇನ್ನು ಘಟನೆ ನಡೆದ ಸ್ಥಳದಲ್ಲಿದ್ದವರ ದೇಹ ಛಿದ್ರಛಿದ್ರಗೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕತ್ತಲು ಆವರಿಸಿದ್ದರಿಂದ ಮೃತದೇಹಗಳ ಮೇಲೆಯೇ ಜನ ಓಡಾಡಿದ್ದಾರೆ ಎಂದು ತಿಳಿದುಬಂದಿದೆ.
ಹುಣಸೊಡು, ಬಸವಗಂಗೂರು, ಕಲ್ಲಗಂಗೂರು, ದೇವಕತಿಕೊಪ್ಪ, ಮೊಜಪ್ಪನ ಹೊಸೂರು, ಗೆಜ್ಜೆನಹಳ್ಳಿ ಭಾಗದಲ್ಲಿ 150ಕ್ಕೂ ಹೆಚ್ಚು ಕ್ರಷರ್ ಮತ್ತು ಕ್ವಾರಿಗಳಿವೆ. ಅಬ್ಬಲಗೆರೆಯಿಂದ ಹುಣಸೋಡು, ಕಲ್ಲಗಂಗೂರು, ಹೊಸೂರು, ಗೆಜ್ಜೆನಹಳ್ಳಿ ಮಾರ್ಗವಾಗಿ ಕಿರಿದಾದ ರಸ್ತೆ ಇದ್ದು, ಕ್ರಷರ್ ಲಾರಿಗಳ ಆರ್ಭಟಕ್ಕೆ ನಿತ್ಯ ಬೆಸ್ತುಬೀಳುತ್ತಿದ್ದ ಜನರು, ಗುರುವಾರ ರಾತ್ರಿ ಸಂಭವಿಸಿದ ಸ್ಫೋಟದ ಶಬ್ದಕ್ಕೆ ಅಕ್ಷರಶಃ ನಲುಗಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಇದುವರೆಗೂ ಛಿದ್ರಛಿಧ್ರಗೊಂಡ 5 ಮೃತದೇಹಗಳು ಸಿಕ್ಕಿದೆ. ರಾತ್ರಿಯೇ 2 ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
PublicNext
22/01/2021 03:50 pm