ಶಿವಮೊಗ್ಗ: 16 ವರ್ಷದ ಅಪ್ರಾಪ್ತ ಬಾಲಕಿ ತನ್ನ ದೊಡ್ಡಪ್ಪನ ಮಗನಿಂದಲೇ ನಿರಂತರ ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಡೆತ್‍ನೋಟ್ ಬರೆದಿಟ್ಟು ಆಕೆ ನೇಣಿಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತೀರ್ಥಹಳ್ಳಿ ಮೂಲದ ಆರೋಪಿ ಮೃತ ಹುಡುಗಿಗೆ ದೊಡ್ಡಪ್ಪನ ಮಗನಾಗಿದ್ದು, ಸಂಬಂಧದಲ್ಲಿ ಸಹೋದರನಾಗಗಿದ್ದು, ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದು, ಇತ್ತೀಚೆಗೆ ಆಕೆ ಐದು ತಿಂಗಳ ಗರ್ಭಿಣಿ ಎಂಬುದು ತಿಳಿಯುತ್ತಿದ್ದಂತೆ ನಾಪತ್ತೆಯಾಗಿದ್ದನು.
ಬಾಲಕಿ ಗರ್ಭಿಣಿಯಾಗಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಮನನೊಂದ ಹುಡುಗಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಹಾಕಿಕೊಂಡು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆ ವೇಳೆ ಡೆತ್ ನೋಟ್ ಬರೆದಿದ್ದು, ಡೆತ್ ನೋಟ್ ಆಧಾರದ ಮೇರೆಗೆ ಬಾಲಕಿಯ ದೊಡ್ಡಪ್ಪನ ಮಗನನ್ನು ಪೋಕ್ಸೊ ಕಾಯಿದೆಯಡಿ ಪೊಲೀಸರು ಬಂಧಿಸಿದ್ದಾರೆ, ಈ ಸಂಬಂಧ ಆರೋಪಿಯನ್ನು ವಿಚಾರಣೆ ಒಳಪಡಿಸಲಾಗಿದೆ ಎಂದು ಹೊಸ ನಗರ ಸಿಪಿಐ ಮಧುಸೂದನ್ ತಿಳಿಸಿದ್ದಾರೆ.
PublicNext
02/10/2020 12:52 pm