ಮುಂಬೈ: ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಈಗೊಂದು ವೀಡಿಯೋ ಹಂಚಿಕೊಂಡಿದ್ದಾರೆ. ಈ ವೀಡಿಯೋ ಕೆಚ್ಚೆದೆಯ ಭಾರತೀಯ ಸೇನಾಧಿಕಾರಿಯ ಆ ಹುಮ್ಮಸನ್ನ ಕಟ್ಟಿಕೊಡುತ್ತದೆ. ಸೇನೆಯ ಮಹತ್ವವನ್ನ ಹೇಳುವ ಈ ವೀಡಿಯೋ ಸದ್ಯ ಅನುಪಮ್ ಖೇರ್ ಟ್ವಿಟರ್ ಪೇಜ್ ನಲ್ಲಿಯೇ ಇದೆ.ಬನ್ನಿ, ನೋಡೋಣ.
ಶಿಕ್ಷಣದಿಂದ ನೀವೂ ಎಂತಹ ಹುದ್ದೆಯನ್ನೂ ಕೂಡ ಏರಬಹುದು.ಆದರೆ ಸೇನೆ ಎಲ್ಲದಕ್ಕೂ ಮಿಗಿಲಾಗಿರೋದು.ಇದು ನಿಮಗೆ ಜೀವನವನ್ನ ನೀಡುತ್ತದೆ ಎಂದು ಭಾರತೀಯ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.
39 ವರ್ಷದಿಂದ ಸೇನೆಯಲ್ಲಿ ದೇಶ ಸೇವೆ ಮಾಡ್ತಿರೋ ಈ ಹಿರಿಯ ಸೇನಾಧಿಕಾರಿ ಹತ್ತು ಹಲವು ಬಾರಿ ಗಾಯಕೊಂಡಿದ್ದಾರೆ. ಆದರೂ ಇವರ ಕೆಚ್ಚೆದೆಯ ಮಾತುಗಳು ಕೇಳಿದ್ರೆ ಎಂತವರಿಗೂ ಹುಮ್ಮಸು ಮೂಡುತ್ತದೆ. ಅದಕ್ಕೇನೆ ಬಾಲಿವುಡ್ ನಟ ಅನುಪಮ್ ಖೇರ್ ಈ ವೀಡಿಯೋವನ್ನ ಈಗ ಟ್ವಿಟರ್ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ. ಎಲ್ಲರಿಗೂ ಸ್ಪೂರ್ತಿ ನೀಡುತ್ತಿದ್ದಾರೆ.
PublicNext
11/12/2021 01:13 pm