ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚನ್ನಗಿರಿ ಬಾಲಕಿಗೆ ಪುನೀತ್ ರಾಜಕುಮಾರ್ ನೆರವು: ನಿತ್ಯವೂ ಪೂಜೆ ಸಲ್ಲಿಸುತ್ತಿದೆ ಕುಟುಂಬ..!

ದಾವಣಗೆರೆ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ತಿಂಗಳು ಕಳೆದಿವೆ. ಅವ್ರು ಮಾಡಿದ ಸಮಾಜಮುಖಿ ಕಾರ್ಯಗಳು ಒಂದೊದಾಗಿ ಹೊರಬರುತ್ತಿವೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಬಾಲಕಿಗೆ 12.5 ಲಕ್ಷ ರೂಪಾಯಿ ನೆರವು ನೀಡಿ ಚಿಕಿತ್ಸೆ ಕೊಡಿಸಿ ಬಾಲಕಿಯ ಜೀವ ಉಳಿಸಿದ್ದರು. ಈ ಕೃತಜ್ಞತೆಗಾಗಿ ಇಡೀ ಕುಟುಂಬವೇ ನಿತ್ಯವೂ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನಮನ ಸಲ್ಲಿಸುತ್ತಿದೆ.

ಅಪ್ಪು ಅಗಲಿ ಬರೋಬ್ಬರಿ ಒಂದು ತಿಂಗಳು ಕಳೆದಿದೆ. ಆದರೆ ಅವರ ನೆನಪು ಮಾತ್ರ ದೂರವಾಗ್ತಾ ಇಲ್ಲ.. ಸಿನಿಮಾ ನಟನೆಗೆ ಸೀಮಿತವಾಗದ ಅಪ್ಪು ಸಮಾಜ ಸೇವೆ ಮೂಲಕ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದರು... ಅಪ್ಪು ಅಗಲಿದಾಗ ಅವರ ಗಳಿಸಿದ ಪ್ರೀತಿ ನೋಡಿ ಅಭಿಮಾನಿಗಳಿಗೆ ಅಪ್ಪು ನಿಜವಾಗಿಯೇ ದೇವರಾಗಿಬಿಟ್ಟಿದ್ದಾರೆ...

ಚನ್ನಗಿರಿ ಪಟ್ಟಣದ ಕಣಸಾಲು ಬೀದಿಯ ಕುಮಾರ್ ಕುಟುಂಬ ಬಡತನದಲ್ಲಿ ಬೇಗುದಿಯಲ್ಲಿ ಬೇಯುತಿತ್ತು. ಕುಮಾರ್ ಮತ್ತು ಮಂಜುಳ ದಂಪತಿ ಮಗಳು ಪ್ರೀತಿ ಅಪ್ಪಟ ಅಪ್ಪು ಅಭಿಮಾನಿಯಾಗಿದ್ದಳು. ಚಿಕ್ಕ ವಯಸ್ಸಿನಿಂದ ಅಪ್ಪು ಸಿನೆಮಾ, ಡ್ಯಾನ್ಸ್ ನೋಡಿ ಬೆಳೆದಿದ್ದ ಪ್ರೀತಿಗೆ ಅವಳ 14 ನೇ ವಯಸ್ಸಿನಲ್ಲೇ ಎರಡು ಕಿಡ್ನಿ ಫೇಲ್ ಆಗಿದ್ದವು. ಕುಮಾರ್ ಕೇವಲ ಇಸ್ತ್ರೀ ಮಾಡಿ ಜೀವನ ನಡೆಸುತ್ತಿದ್ದರು. ಈ ವೇಳೆ ಪ್ರೀತಿಗೆ ಈ ಮಟ್ಟಿನ ಆರೋಗ್ಯ ಸಮಸ್ಯೆ ಆಗಿದ್ದು ಮಗಳನ್ನ ತೋರಿಸಲು ಹಣವಿಲ್ಲದೆ ಪರದಾಡುತಿದ್ದರು.

ಈ ವೇಳೆ ಕುಮಾರ್ ಅವರು ಪ್ರೀತಿಗೆ ಆಗಿರೋ ಸಮಸ್ಯೆಯನ್ನ ವಿಡಿಯೋ ಮಾಡಿ ನಟ ಪುನೀತ್ ಗೇ ಕಳುಹಿಸಿದ್ದರು. ಈ ವೇಳೆ ಪುನೀತ್ ಅವರು ಅವರನ್ನ ತಮ್ಮ ಮನೆಗೆ ಕರೆದು ಪ್ರೀತಿಯನ್ನ ಪ್ರೀತಿಯಿಂದ ಮಾತನಾಡಿಸಿ ಅವರಿಗೆ ಯಾವುದಾದ್ರೂ ಆಸ್ಪತ್ರೆಗೆ ತೋರಿಸಿ. ಹಣಕಾಸಿನ ಚಿಂತೆ ಮಾಡಬೇಡಿ ನಾನು ಹಣವನ್ನ ನೀಡ್ತೀನಿ ಅಂತ ಹೇಳಿದ್ರು. ಅದರಂತೆ ಪ್ರೀತಿಗೆ ಅವರ ತಂದೆ ತಾಯಿಗೆ 2017 ರಲ್ಲಿ ಪ್ರೀತಿಯ ಒಂದು ಕಿಡ್ನಿ ಕಸಿಯನ್ನ ಮಾಡಿಸಿದ್ದರು. ಒಟ್ಟು 12. 5 ಲಕ್ಷ ಖರ್ಚು ಬಂದಿದ್ದು ಅದನ್ನ ಅಪ್ಪು ಅವರೇ ನೀಡಿದ್ದರು.

ಇದರಿಂದ‌ ಪ್ರೀತಿ ಬದುಕುಳಿದು ಇದೀಗ ಆರಾಮಾಗಿ ಜೀವನ ನಡೆಸುತಿದ್ದರು. ಆದರೆ ಪ್ರೀತಿಗೆ ಪುನರ್ಜನ್ಮ ನೀಡಿದ ಅಪ್ಪು ಇದೀಗ ಅಗಲಿದ್ದು ಕುಮಾರ್ ಕುಟುಂಬಕ್ಕೆ ಸಾಕಷ್ಟು ನೋವು ಉಂಟು ಮಾಡಿತ್ತು...ತಮ್ಮ ಕುಟುಂಬವನ್ನ ಕಷ್ಟದಿಂದ ಕಾಪಾಡಿ ಹೊಸ ಬದುಕು ನೀಡಿದ ಅಪ್ಪು ಅವರ ಭಾವ ಚಿತ್ರಕ್ಕೆ ಇಡೀ ಕುಟುಂಬ ನಿತ್ಯ ಪೂಜೆ ಸಲ್ಲಿಸುವುದರ ಮೂಲಕ ಗೌರವ ಸಲ್ಲಿಸುತ್ತಿದೆ.

Edited By : Nagesh Gaonkar
PublicNext

PublicNext

06/12/2021 04:35 pm

Cinque Terre

47.83 K

Cinque Terre

1