ವರದಿ: ಗಣೇಶ್ ಹೆಗಡೆ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಸಂತಸದ ಸುದ್ದಿ. ವರನಟ ಡಾ. ರಾಜ್‌ಕುಮಾರ್ ಅವರ ಕಂಚಿನ ಪ್ರತಿಮೆ ಮಾದರಿಯಲ್ಲಿ ಪುನೀತ್ ರಾಜ್‌ಕುಮಾರ ಪುತ್ಥಳಿ ಬೆಂಗಳೂರಲ್ಲಿ ಸ್ಥಾಪನೆ ಆಗಲಿದೆ. ಕತ್ರಿಗುಪ್ಪೆಯಲ್ಲಿ ಪ್ರತಿಮೆ ತಯಾರಿಕೆ ನಡೆಯುತ್ತಿದ್ದು, ಶಿಲ್ಪಿ ಶಿವದತ್ ಅವರಿಂದ ಕಂಚಿನ ಪುತ್ಥಳಿ ನಿರ್ಮಾಣವಾಗುತ್ತಿದೆ.
3 ಅಡಿ ಎತ್ತರದ 'ರಾಜಕುಮಾರ' ಸಿನಿಮಾದ ಇಮೇಜ್ ಮಾದರಿಯಲ್ಲಿ 95ರಿಂದ 100 ಕೆ.ಜಿ. ತೂಕ ಕಂಚಿನ ಪ್ರತಿಮೆ ನಿರ್ಮಾಣವಾಗಲಿದೆ. ಬಿಬಿಎಂಪಿ ನೌಕರರ ಸಂಘ ಹಾಗೂ ಪಾಲಿಕೆಯ ಕನ್ನಡ ಸಂಘಟನೆ ಪ್ರತಿಮೆ ಸ್ಥಾಪನೆಗೆ ಮುಂದಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿ ಗಾಜಿನ ಮನೆ ಮುಂಭಾಗದಲ್ಲಿ ಇರುವ ಡಾ. ರಾಜ್‌ಕುಮಾರ್ ಪ್ರತಿಮೆ ಪಕ್ಕದಲ್ಲಿ ಪುನೀತ್ ರಾಜ್‌ಕುಮಾರ್ ಪುತ್ಥಳಿ ಇಡುವ ಚಿಂತನೆ ಇದೆ.
ಈ ಬಗ್ಗೆ ಅನುಮತಿಗಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಮನವಿ ಸಹ ನೀಡಲಾಗಿದೆ. ಇನ್ನು ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್‌ಕುಮಾರ್ ಪ್ರತಿಮೆ ಮಾಡಿದ ಹೆಗ್ಗಳಿಕೆ ಶಿಲ್ಪಿ ಶಿವದತ್ ಅವರದ್ದಾಗಿದೆ. ಶಿವದತ್ ಅವರು ಸಿದ್ಧಗಂಗಾಮಠದ ಹಿಂದಿನ ಶ್ರೀಗಳು ಜಯಚಾಮರಾಜೇಂದ್ರ ಒಡೆಯರ್, ಬಾಲಗಂಗಾಧರನಾಥ ಶ್ರೀಗಳ ಪ್ರತಿಮೆ ತಯಾರಿಸಿದ್ದಾರೆ.
ಇನ್ನು ಅಭಿಮಾನಿಗಳು ಮನೆಯಲ್ಲಿ ಇಟ್ಟುಕೊಳ್ಳಲು ಪುನೀತ್ ರಾಜ್‌ಕುಮಾರ್ ಶಿಲ್ಪ ಸ್ಮರಣಿಕೆ ಸಾಕಷ್ಟು ಬೇಡಿಕೆ ಬರುತ್ತಿದೆಯಂತೆ. 7-8 ಇಂಚು ಚಿಕ್ಕದಾದ ಸ್ಮರಣಿಕೆಗಳು ಕೂಡ ಸಿದ್ಧವಾಗಿವೆ.
PublicNext
13/11/2021 07:42 pm