ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಇಂದು ಎಐಸಿಸಿ ಮುಖಂಡ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಕೈಗೊಂಡಿದ್ದು, ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ರು. ಹಾಗೇ ಹಿರಿಯೂರು ತಾಲ್ಲೂಕಿನ ಗ್ರಾಮೀಣ ಭಾಗದಿಂದ ಬಂದಿದ್ದ ಜನರ ಪೈಕಿ ಇದೇ ತಾಲ್ಲೂಕಿನ ಕಂಡೇನಹಳ್ಳಿಯ ಬಡ ರೈತನ ಹೇಳಿಕೆಯೊಂದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಕಾರ್ಯಕ್ರಮಕ್ಕೆ ಅಂತ ಬಂದಿದ್ದ ರೈತ ಹೇಳೋ ಪ್ರಕಾರ ಸ್ಥಳೀಯ ಮುಖಂಡರು 300 ರೂ. ಕೊಡುತ್ತೇವೆ ಬನ್ನಿ ಅಂತ ಕರೆದುಕೊಂಡು ಬಂದಿದ್ದಾರೆ. ಅದ್ರೆ ಇಲ್ಲಿಗೆ ಬಂದಮೇಲೆ ಮೇಲೆ ಗೊತ್ತಾಯಿತು ಸ್ಥಳೀಯ ಮುಖಂಡರ ಅಸಲಿಯತ್ತು ಅಂತ ರೈತ ಗರಂ ಆಗಿರೋ ವೀಡಿಯೋ ಇದೀಗ ವೈರಲ್ ಆಗಿದೆ.
PublicNext
10/10/2022 08:25 pm