ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಹೌದು ಆಲಘಟ್ಟ ಗ್ರಾಮದ ಸಮೀಪದ ದಿಲೀಪ್ ಎಂಬುವರ ಹೊಲದಲ್ಲಿ ಎರಡು ಚಿರತೆಗಳು ಕಲ್ಲಿನ ಮೇಲೆ ಕುಳಿತಿವೆ ಇದನ್ನ ಕಂಡ ಜಮೀನಿನ ರೈತದಲ್ಲಿ ದಿಲೀಪ್ ಭಯ ಬಿದ್ದು ಗ್ರಾಮಕ್ಕೆ ಓಡಿ ಬಂದಿದ್ದಾರೆ.
ಗ್ರಾಮದಲ್ಲಿ ಪದೇಪದೇ ಚಿರುತೆಗಳು ಕಾಣಿಸಿಕೊಳ್ಳುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ, ಅರಣ್ಯ ಅಧಿಕಾರಿಗಳು ಚಿರತೆ ಹಿಡಿಯುವಲ್ಲಿ ನಿರ್ಲಕ್ಷ ವಹಿಸುತ್ತಿದ್ದಾರೆ, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡುತ್ತಾರೆ ಸುಮ್ನೆ ಹೋಗ್ತಾರೆ ಬೋನ್ ಇಡುವ ಪ್ರಯತ್ನವನ್ನು ಮಾಡಿಲ್ಲ ಎಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ಮೇಲೆ ದೂರುತ್ತಿದ್ದಾರೆ.
Kshetra Samachara
23/01/2025 07:03 pm