ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂಪ್ರದಾಯದಂತೆ ಹೂವಿನ ಹಬ್ಬ ಆಚರಿಸುವ ಮೂಲಕ ದೇವರ ಎತ್ತುಗಳನ್ನು ಓಡಿಸುವ ಸ್ಪರ್ಧೆ

ಮೊಳಕಾಲ್ಮುರು:- ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂಪ್ರದಾಯದಂತೆ ಹೂವಿನ ಹಬ್ಬ ಆಚರಿಸುವ ಮೂಲಕ ದೇವರ ಎತ್ತುಗಳನ್ನು ಓಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.

ದೀಪಾವಳಿ ಅಮಾವಾಸ್ಯೆ ದಿನದಂದು ಪ್ರತಿ ವರ್ಷವೂ ಈ ಸಂಪ್ರದಾಯ ನಡೆಸಿಕೊಂಡು ಬರಲಾಗುತ್ತಿದ್ದು,ಮೂರು ಮಂದಿ ನಾಯಕರು ಏಳು ಮಂದಿ ಹಿರಿಯರು ಹಾಗೂ ಸಾವಿರ ಕುಲಬಾಂಧವರ ಸಮ್ಮುಖದಲ್ಲಿ ಮ್ಯಾಸಬೇಡ ಬುಡಕಟ್ಟು ಸಂಪ್ರದಾಯದಂತೆ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವರ ಎತ್ತುಗಳಿಗೆ ಚೆಂಡು ಹೂವು ಮತ್ತು ಸೇವಂತಿಗೆ ಹೂವಿನಿಂದ ಅಲಂಕರಿಸಿ, ಹೊಸ ಪದಿ ಕಟ್ಟಿ ದೇವರ ಎತ್ತುಗಳನ್ನು ಓಡಿಸುವ ಸ್ಪರ್ಧೆ ನಡೆಸಲಾಯಿತು.

ದೀಪಾವಳಿ ಹಬ್ಬದಲ್ಲಿ ಈ ಕಾರ್ಯಕ್ರಮ ನಡೆದ ನಂತರವಷ್ಟೇ ಚಂಡು ಹೂ ಮತ್ತು ಸೇವಂತಿಗೆ ಹೂಗಳನ್ನು ಬಳಸುವ ಸಂಪ್ರದಾಯವಿದೆ, ಶೈಲ ಮಲ್ಲಿಕಾರ್ಜುನಸ್ವಾಮಿ ದೇವರ ಎತ್ತುಗಳ ಗುಂಪಿಗೆ ಹೊಸದಾಗಿ ಸೇರಿದ ಎತ್ತುಗಳಿಗೆ ದೇವರ ಮುದ್ರೆಯನ್ನು ಒತ್ತುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡವು.

Edited By : PublicNext Desk
Kshetra Samachara

Kshetra Samachara

02/11/2024 04:24 pm

Cinque Terre

1.68 K

Cinque Terre

0

ಸಂಬಂಧಿತ ಸುದ್ದಿ