ಚಿತ್ರದುರ್ಗ: ದೇಶದ ಎಲ್ಲೆಡೆ ಹೊಸ ವರ್ಷವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಚಿತ್ರದುರ್ಗ ಐತಿಹಾಸಿಕ ಏಳು ಸುತ್ತಿನ ಕೋಟೆಯಲ್ಲಿ ಪ್ರವಾಸಿಗರು ಹೊಸ ವರ್ಷವನ್ನ ಕೇಕ್ ಕಟ್ ಮಾಡುವುದರ ಮೂಲಕ ಸಂಭ್ರಮಿಸಿದ್ದಾರೆ.
ಐತಿಹಾಸಿಕ ಹಿನ್ನೆಲೆಗಳು ಹೊಂದಿರುವಂತಹ ಏಳು ಸುತ್ತಿನ ಕೋಟೆಗೆ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಹಸ್ರಾರು ಪ್ರವಾಸಿಗರು ಆಗಮಿಸಿ, ಕೋಟೆಯನ್ನು ವೀಕ್ಷಣೆ ಮಾಡುತ್ತಾ ಹೊಸ ವರ್ಷವನ್ನು ಸಂಭ್ರಮಿಸಿದ್ದಾರೆ.
ಕೋಟೆಯ ಒಳಭಾಗದಲ್ಲಿರುವಂತಹ ಏಕನಾಥೇಶ್ವರಿ, ಗಣಪತಿ ದೇವಾಲಯಗಳು, ಒನಕೆ ಓಬವ್ವನ ಕಿಂಡಿ, ಅಕ್ಕ ತಂಗಿಹೊಂಡ, ಪಾಳೆಗಾರರ ಕಚೇರಿ, ತುಪ್ಪದ ಕೊಳ , ಬತೇರಿ , ಉಯ್ಯಾಲೆ ಕಂಬ, ಗಾಳಿಗೋಪುರ, ಬೀಸುವ ಕಲ್ಲು ಅನೇಕ ಸ್ಥಳಗಳನ್ನ ವೀಕ್ಷಣೆ ನಡೆಸಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಸಡಗರ ಸಂಭ್ರಮದಿಂದ ಮಾಡುವುದರ ಮೂಲಕ 2025ನೇ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಂಡು ಸಂಭ್ರಮಿಸಿದ್ದಾರೆ.
PublicNext
01/01/2025 06:47 pm