ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ತಂದೆ ತಾಯಿ ಪಾದಪೂಜೆ ಮಾಡಿದ ವಿದ್ಯಾರ್ಥಿಗಳು- ಪೋಷಕರ, ಶಿಕ್ಷಕರ ಆನಂದ ಬಾಷ್ಪ

ಮೊಳಕಾಲ್ಮುರು: ಮಕ್ಕಳಿಗೆ ತಂದೆ- ತಾಯಿಯಲ್ಲಿ ಪೂಜನೀಯ ಭಾವನೆಗಳನ್ನು ಬಿತ್ತುವ ನಿಟ್ಟಿನಲ್ಲಿ ಮೊಳಕಾಲ್ಮುರು ಪಟ್ಟಣದ ಸರ್ವೋದಯ ಮತ್ತು ಚೈತನ್ಯ ಪಬ್ಲಿಕ್ ಹೈಸ್ಕೂಲ್ ನಲ್ಲಿ ಬುಧವಾರದಂದು ವಿಶಿಷ್ಟ ಕಾರ್ಯಕ್ರಮ ಆಯೋಜಿಸುವ ಮೂಲಕ ಗಮನ ಸೆಳೆದಿದ್ದಾರೆ.

ಹೊಸ ವರ್ಷದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪಾದಪೂಜೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ತಂದೆ- ತಾಯಿಯರು ಹೊಸ ಹೊಸ ಬಟ್ಟೆ ತೊಟ್ಟು ಶಾಲೆಗೆ ಆಗಮಿಸಿದ್ದರು. ಶಾಲೆಯ ಮಕ್ಕಳು ಸಹ ಹೊಸ ಹೊಸ ಉಡುಗೆ ತೊಟ್ಟು ಹಬ್ಬದ ಆಚರಣೆ ರೀತಿಯಲ್ಲಿ ಶಾಲೆಗೆ ಆಗಮಿಸಿದ್ದರು. ಶಾಲೆಯ ಮೈದಾನದಲ್ಲಿ ಎಲ್ಲಾ ಮಕ್ಕಳ ತಂದೆ- ತಾಯಿಯನ್ನು ಕುರ್ಚಿಗಳ ಮೇಲೆ ಸಾಲಾಗಿ ಕೂರಿಸಿ ಮಕ್ಕಳು ತಮ್ಮ ತಮ್ಮ ತಂದೆ- ತಾಯಿಯ ಪಾದ ಪೂಜೆ ಮಾಡಿದರು. ತಂದೆ- ತಾಯಿಯ ಕೈಗೆ ಹೂವಿನಿಂದ ಕಂಕಣ ಕಟ್ಟಿ, ತಟ್ಟೆಯಲ್ಲಿ ತಂದೆ- ತಾಯಿಯ ಪಾದಗಳನ್ನಿರಿಸಿ ತೊಳೆದು ಪೂಜೆ ಸಲ್ಲಿಸಿದರು.

ತಂದೆ- ತಾಯಿಯ ಪಾದಪೂಜೆಯಲ್ಲಿ ಪಾಲ್ಗೊಂಡ ಮಕ್ಕಳ ಮುಖದಲ್ಲಿ ಧನ್ಯತಾ ಭಾವ ಮೂಡಿತ್ತು. ಪಾದಪೂಜೆ ಮಾಡಿಸಿಕೊಂಡ ತಂದೆ- ತಾಯಿ ಮತ್ತು ಶಿಕ್ಷಕರ ಆನಂದಕ್ಕೆ ಪಾರವೇ ಇರಲಿಲ್ಲಾ. ಮಕ್ಕಳಿಂದ ಪಾದ ಪೂಜೆಗೆ ಒಳಗಾದ ತಂದೆ- ತಾಯಿ ಮಕ್ಕಳ ಪ್ರೀತಿ ಕಂಡು ಸಂತಸ ವ್ಯಕ್ತಪಡಿಸಿದರು. ಮಕ್ಕಳಲ್ಲಿ ಬಾಲ್ಯದಲ್ಲಿಯೇ ತಂದೆ- ತಾಯಿ ಬಗ್ಗೆ ಪೂಜನೀಯ ಭಾವನೆ ಮೂಡಿಸಲು ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಶಾಲೆಯ ಸಿಬ್ಬಂದಿಗೆ, ಅಡಳಿತ ಮಂಡಳಿಗೆ ಪೋಷಕರು ವಿಶೇಷ ಅಭಿನಂದನೆ ಸಲ್ಲಿಸಿದರು‌.

ಕಾರ್ಯಕ್ರಮದಲ್ಲಿ ಅರ್ಚಕರಾದ ಶ್ರೀವತ್ಸ ಮಕ್ಕಳಿಗೆ ಆಶೀರ್ವಚನ ನೀಡಿದರು. ಉಪನ್ಯಾಸಕ ಗಿರೀಶ್, ಸಂಸ್ಥೆಯ ಕಾರ್ಯದರ್ಶಿ ವನಿತಾ ಗಿರೀಶ್ ಸೇರಿದಂತೆ ಶಾಲೆಯ ಶಿಕ್ಷಕರು, ಮಕ್ಕಳು, ಹಾಗೂ ಪೋಷಕರು ಭಾಗಿಯಾಗಿದ್ದರು.

Edited By : Nagesh Gaonkar
PublicNext

PublicNext

02/01/2025 08:31 am

Cinque Terre

57.82 K

Cinque Terre

0

ಸಂಬಂಧಿತ ಸುದ್ದಿ