ಶ್ರೀರಾಮ ಸೇನೆಯಿಂದ ಏಳು ದಿನಗಳ ಕಾಲ ಚಿಕ್ಕಮಗಳೂರಿನಲ್ಲಿ ನವೆಂಬರ್ 7 ರಿಂದ 13ರ ವರೆಗೆ ದತ್ತಪೀಠದಲ್ಲಿ ದತ್ತಮಾಲಾ ಕಾರ್ಯಕ್ರಮ ನಡೆಯಲಿದೆ.
ಮಾಲಾಧಾರಣೆ ಮಾಡುವುದರ ಮೂಲಕ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ಇದೇ ವೇಳೆ ಚಿಕ್ಕಮಗಳೂರಿನಲ್ಲಿ
ಸರ್ಕಾರಕ್ಕೆ ನೇರವಾಗಿ ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ
ಎಚ್ಚರಿಕೆ ನೀಡಿದ್ದಾರೆ.
ಕೋರ್ಟ್ ನಲ್ಲಿ ಕೇಸ್ ಕ್ಲೀಯರ್ ಆಗಿದೆ. ದತ್ತಪೀಠವನ್ನು ನೀವೇ ಇಟ್ಟುಕೊಂಡು ಮೆರೆದವರು. ಇಲ್ಲಿಯವರೆಗೂ ಅರ್ಚಕರನ್ನು ನೇಮಕ ಮಾಡದೇ ಇರುವುದು ನಾಚಿಕೆಗೇಡಿನ ಸಂಗತಿ. ಈಗ ಹಿಂದೂ ಸಮಾಜ ಜಾಗೃತವಾಗಿದೆ. ನವೆಂಬರ್ 13 ರ ಒಳಗೆ ಅರ್ಚಕರನ್ನು ನೇಮಕ ಮಾಡಲೇಬೇಕು. ಒಂದು ವೇಳೆ ಮಾಡದಿದ್ದರೆ ಪ್ರವೀಣ್ ನೆಟ್ಟಾರು ಹತ್ಯೆಯ ಸಂದರ್ಭ, ಹಿಂದು ಸಮಾಜ ಯಾವ ರೀತಿ ಆಕ್ರೋಶ ವ್ಯಕ್ತಪಡಿಸಿತೋ, ಅದೇ ರೀತಿ ಆಕ್ರೋಶ ದತ್ತಪೀಠದಲ್ಲಿ ನೀವು ನೋಡುತ್ತೀರಾ ಎಂದು ಎಚ್ಚರಿಸಿದರು.
ದತ್ತ ಮಾಲೆ ಧರಿಸಿ ಬಿ.ಎಸ್.ಯಡಿಯೂರಪ್ಪ ದತ್ತ ಪೀಠಕ್ಕೆ ಬರದಿದ್ದರೆ, ಅಧಿಕಾರ ಕಳೆದುಕೊಳ್ಳುತ್ತೀರಾ ಎಂದು ಹೇಳಿದ್ದೆ, ಅದೇ ರೀತಿ ಆಯಿತು. ಈಗ ಅರ್ಚಕರನ್ನು ನೇಮಕ ಮಾಡದಿದ್ದರೆ ನಿಮ್ಮನ್ನು ಹಿಂದೂ ಸಮಾಜ ಸಂಪೂರ್ಣವಾಗಿ ತಿರಸ್ಕಾರ ಮಾಡುತ್ತದೆ.
ನಾನು ಎಚ್ಚರಿಕೆ ಕೊಡುವುದರ ಮೂಲಕ ಈ ಮಾತನ್ನು ಹೇಳುತ್ತಿದ್ದೇನೆ ಎಂದರು.
PublicNext
11/10/2022 05:53 pm