ಚಿಕ್ಕಮಗಳೂರು : ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ದಿನ ದಿನಕ್ಕೂ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗುತಿದೆ. ಇದೀಗ ಸರ್ಕಾರದ ವಿರುದ್ಧ ಕೆಂಡ ಕಾರಿರುವ ವಿಧಾನಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್, ಮುಜರಾಯಿ ದೇವಾಲಯದ ಹಣ ತೆಗೆದುಕೊಂಡು ರಾಜ್ಯ ನಡೆಸ್ತೀರಾ ಮಸೀದಿ-ಚರ್ಚ್ ಹಣವನ್ನ ಅವರಿಗೆ ಬಿಟ್ಟು, ಅವರು ಬಲವಾಗಿ ಬೇರೂರುವಂತೆ ಮಾಡ್ತಿದ್ದೀರಾ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಕ್ಫ್ ಆಸ್ತಿ ನಮ್ಮದು ಎಂಬ ಹೋರಾಟಕ್ಕೆ ಕಾಂಗ್ರೆಸ್ ಮುಂದಾಗಿದೆ, ಇದಕ್ಕೆ ನೇರ ಕಾರಣ ಸಿಎಂ ಸಿದ್ದರಾಮಯ್ಯ, ಜಮೀರ್ ಆಹಮದ್ ಎಂದಿದ್ದಾರೆ. ಅಲ್ಲದೇ ರೈತರ ಜಮೀನು ರೈತರಿಗೆ ಉಳೀಬೇಕು, ಅದರಲ್ಲಿ ಗೊಂದಲ ಹುಟ್ಟು ಹಾಕಬಾರದು ರೈತರ ಪರ ಬಿಜೆಪಿ ನಿರಂತರ ಹೋರಾಟ ಮಾಡಿತ್ತಿದೆ. ರಾಜಕೀಯ ಮಾಡ್ತಿಲ್ಲ, ಇದಕ್ಕೆ ತಾರ್ಕಿಕ ಅಂತ್ಯ ಕಾಣುಸ್ತೀವಿ ರೈತರು,ಜನಸಾಮಾನ್ಯರಿಗೆ ನ್ಯಾಯ ಕೊಡಿಸೋ ಕೆಲಸ ಮಾಡೇ ಮಾಡ್ತೀವಿ ಎಂದು ಮೂಡಿಗೆರೆಯಲ್ಲಿ ಎಂ.ಕೆ.ಪ್ರಾಣೇಶ್ ಹೇಳಿಕೆ ನೀಡಿದ್ದಾರೆ.
Kshetra Samachara
03/11/2024 06:00 pm