ಚಿಕ್ಕಮಗಳೂರು: ಮಾತೃ ಭಾಷೆ ಕನ್ನಡದ ಜೊತೆ ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರಿಗೆ ತಮಿಳು ಪ್ರೇಮ ಹುಟ್ಟುಕೊಂಡಿದೆ. ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ತಿರುವಳ್ಳುವರ್ ಸಂಘದ ಕಾರ್ಯಕ್ರಮದಲ್ಲಿ ಸಿ.ಟಿ.ರವಿ ತಮಿಳಿಗರೇ ಇದ್ದ ಕಾರ್ಯಕ್ರಮದಲ್ಲಿ ತಮಿಳಿನಲ್ಲೇ ಭಾಷಣ ಆರಂಭಿಸಿ ನೆರೆದಿದ್ದವರ ಹುಬ್ಬೇರಿಸುವಂತೆ ಮಾಡಿದ್ದಾರೆ.
ತಮಿಳಿನಲ್ಲೇ ಎಲ್ಲರದ್ದೂ ಊಟ-ತಿಂಡಿ ಆಯ್ತಾ ಎಂದು ಕೇಳಿದ ಸಿ.ಟಿ.ರವಿ, ನನಗೆ ಚೆನ್ನಾಗಿ ತಮಿಳು ಮಾತನಾಡಲು ಬರುತ್ತೆ. ಆದರೆ, ಕನ್ನಡದಲ್ಲೇ ಭಾಷಣ ಮಾಡುತ್ತೇನೆ ಎಂದು ನೆರೆದಿದ್ದವರಿಗೆ ಹೇಳಿ ಪುನಃ ಕನ್ನಡದಲ್ಲೇ ಭಾಷಣ ಮಾಡಿದ್ದಾರೆ. ಬಹುಶಃ ಸಿ.ಟಿ.ರವಿ ತನ್ನ ರಾಜಕೀಯ ಜೀವನದಲ್ಲಿ ಚಿಕ್ಕಮಗಳೂರಿನಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಭಾಷಣ ಆರಂಭಿಸಿದ್ದು ಇದೇ ಮೊದಲು ಅನ್ನಿಸುತ್ತದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡಿನ ಚುನಾವಣೆಯಲ್ಲಿ ಬಿಜೆಪಿ ಉಸ್ತುವಾರಿಯಾದಾಗಿನಿಂದ ತಮಿಳು ಕಲಿತಿದ್ದಾರೆ. ತಮಿಳಿಗರ ಕಾರ್ಯಕ್ರಮದಲ್ಲಿ ತಮಿಳಿನಲ್ಲೇ ಮಾತನಾಡಿ ತಮಿಳಿಗರನ್ನ ಸಿ.ಟಿ. ರವಿ ಖುಷಿಪಡಿಸಿದ್ದಾರೆ.
PublicNext
27/12/2024 08:16 pm