ಚಿಕ್ಕಮಗಳೂರು: ಭಾರತದ ಹೆಮ್ಮೆಯ ಮಾಜಿ ಪ್ರಧಾನಿಗಳು ಮಾಜಿ ರಿಜರ್ವ್ ಬ್ಯಾಂಕ್ ಗವರ್ನರ್ ಆರ್ಥಿಕ ತಜ್ಞರಾಗಿದ್ದಂತಹ ಮನಮೋಹನ್ ಸಿಂಗ್ ರವರು ನಿಧನ ಹೊಂದಿರುವುದು ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶಾಸಕ ಹೆಚ್. ಡಿ ತಮ್ಮಯ್ಯ ಸಂತಾಪ ಸೂಚಿಸಿದ್ದಾರೆ.
ಪಿ.ವಿ ನರಸಿಂಹರಾವ್ ಅವರ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದ ಶ್ರೀ ಮನಮೋಹನ್ ಸಿಂಗ್ ರವರು ಆ ಸಮಯದಲ್ಲಿ ಇಡೀ ಜಗತ್ತೇ ಆರ್ಥಿಕ ಹಿಂಜರಿತದಿಂದ ತತ್ತರಿಸಿದರು ಕೂಡ ಖಾಸಗೀಕರಣ, ಉದಾರೀಕರಣದ ಹಾಗೂ ಜಾಗತೀಕರಣದ ಮೂಲಕ ಭಾರತದ ಆರ್ಥಿಕತೆಯನ್ನು ಮೇಲೆತ್ತಿದರು. ಅವರ ಗ್ರಾಮೀಣ ಜನರ ಪರವಾದ ಬದ್ಧತೆಯಿಂದ ನರೇಗಾ ಯೋಜನೆ ರೈತರ ಸಾಲ ಮನ್ನಾ ಯೋಜನೆ ಜಾರಿ ಮಾಡುವ ಮೂಲಕ ಭಾರತದ ಇಡೀ ರೈತ ಸಮುದಾಯ ಆರ್ಥಿಕ ಸಂಕಷ್ಟದಿಂದ ಪಾರಾಗುವಂತೆ ಮಾಡಿದರು. ಇಂದು 92 ವರ್ಷದ ತುಂಬು ಜೀವನ ನಡೆಸಿ ಇಹಲೋಕ ತ್ಯಜಿಸಿದ ಈ ಹಿರಿಯ ಚೇತನದ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಚಿಕ್ಕಮಗಳೂರು ಶಾಸಕ ಹೆಚ್.ಡಿ ತಮ್ಮಯ್ಯ ಸಂತಾಪ ಸೂಚಿಸಿದ್ದಾರೆ
Kshetra Samachara
27/12/2024 06:55 pm