ಚಿಕ್ಕಮಗಳೂರು: ನನ್ನ ಬಂಧಿಸಿದ ಬಳಿಕ ಪೊಲೀಸ್ ಇಲಾಖೆ ಯಾರ ನಿರ್ದೇಶನದ ಮೇಲೆ ಹೇಗೆಲ್ಲ ನಡೆದುಕೊಂಡಿತು ಎಂದು ನೋಡಿದ್ದೀರಿ. ನನ್ನ ಮೇಲೆ ಕೇಸ್ ಹಾಕಿ ದೌರ್ಜನ್ಯ ನಡೆಸಲು ಮಂತ್ರಿಗಳೇ ಷಡ್ಯಂತ್ರ ನಡೆಸಿದರು. ಹೀಗಿರುವಾಗ ಇದೇ ಸರ್ಕಾರದ ಕಪಿಮುಷ್ಠಿಯಲ್ಲಿರುವ ಸಿಐಡಿ ತನಿಖೆ ಹೇಗೆ ನಿಷ್ಪಕ್ಷಪಾತವಾಗಿ ಇರಲು ಸಾಧ್ಯ ಎಂದು ಎಂಎಲ್ಸಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಾಸಗಿಯಾಗಿ ನಾನೇಕೆ ಎಫ್‌ಎಸ್‌ಎಲ್ ತನಿಖೆ ಮಾಡಿಸಲಿ? ನನ್ನ ಮೇಲೆ ಆರೋಪ ಮಾಡಿರುವುದು ಮಂತ್ರಿ. ಎಫ್‌ಎಸ್‌ಎಲ್ ವರದಿ ಬರುವ ಮುಂಚೆಯೇ ಪೊಲೀಸರು ನನ್ನನ್ನು ಬಂಧಿಸಿದ್ರೋ ಇಲ್ವೋ? ನನ್ನನ್ನು ಅರೆಸ್ಟ್ ಮಾಡಿಸಲು ಕಾಣದ ಕೈ ಕೆಲಸ ಮಾಡಿದ್ದವಲ್ಲ? ಅದೇ ಕಾಣದ ಕೈ ಎಫ್‌ಎಸ್‌ಎಲ್ ಹಾಗೂ ಸಿಐಡಿ ತನಿಖೆ ಮೇಲೂ ಕೆಲಸ ಮಾಡಬಹುದು.
ಖಾಸಗಿಯಾಗಿ ಕಾಲ್ ಲಿಸ್ಟ್ ತೆಗೆಸಲು ಬರುವುದಿಲ್ಲ, ತನಿಖೆ ನಡೆಸಬೇಕು. ಅದಕ್ಕೆ ನಾನು ಹೇಳಿದ್ದು ನ್ಯಾಯಧೀಶರ ನೇತೃತ್ವದಲ್ಲೇ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಸತ್ಯಕ್ಕೂ- ಪ್ರಾಮಾಣಿಕತೆಗೂ ಕಾಂಗ್ರೆಸ್ಸಿಗೂ ಸಂಬಂಧ ಇಲ್ಲ. ಅಮಿತ್ ಶಾ ಹೇಳಿದ್ದು ಕಾಂಗ್ರೆಸ್ ಅಂಬೇಡ್ಕರ್‌ಗೆ ಹೇಗೆ ಮೋಸ, ಅನ್ಯಾಯ ಮಾಡಿದ್ರು ಅನ್ನೋದರ ಬಗ್ಗೆ, ಇಂದು ಸಂವಿಧಾನ, ಅಂಬೇಡ್ಕರ್ ಜಪ ಮಾಡುತ್ತಿರುವ ಕಾಂಗ್ರೆಸ್ ಅಂದು ಚುನಾವಣೆಯಲ್ಲಿ ಅಂಬೇಡ್ಕರರನ್ನ ಹೇಗೆ ಮೋಸದಿಂದ ಸೋಲಿಸಿದರು ಅನ್ನುವುದರ ಬಗ್ಗೆ ಆದರೆ ಕಾಂಗ್ರೆಸ್ ತಮ್ಮ ಬಂಡವಾಳ ಬಯಲು ಮಾಡಿದ ಅಮಿತ್ ಶಾ ಅವರ ಹೇಳಿಕೆಯನ್ನೇ ತಿರುಚಿ ಅಂಬೇಡ್ಕರ್‌ಗೆ ಅಮಿತ್ ಶಾ ಅವಮಾನ ಮಾಡಿದ್ದಾರೆ ಎಂದರು.
PublicNext
26/12/2024 08:13 pm