ಚಿಕ್ಕಮಗಳೂರು : ನಾನು ಪುನೀತ್ ಅಣ್ಣಾ, ಶಿವಣ್ಣರ ಅಭಿಮಾನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ತನ್ನ ಹಾಡುಗಳ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಕಾಫಿನಾಡು ಚಂದು ಇದೀಗ ಹಾಡುಗಳನ್ನು ಹೇಳುವುದು ಬಿಟ್ಟು ಡೈಲಾಗ್ ಗಳನ್ನು ಹೊಡೆಯುವ ಮೂಲಕ ಜನರನ್ನು ತನ್ನತ್ತ ಸೆಳೆಯುತ್ತಿದ್ದಾರೆ.
ಚಿಕ್ಕಮಗಳೂರಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸುವ ಚಂದು ಅಲ್ಲಿ ಬರುವ ಜನರು ಚಂದು ಬಾಯಿಂದ ಡೈಲಾಗ್ ಹೊಡೆಸಿ ಫೋಟೋ ಕ್ಲಿಕ್ಕಿಸಿ ಸಂತಸ ಪಡುತ್ತಿದ್ದಾರೆ. ಈ ಹಿಂದೆ ಹಲವಾರು, ಹಾಡು ಹಾಗೂ ರೀಲ್ಸ್ ಗಳ ಮೂಲಕ ಕಾಫಿನಾಡು ಚಂದು ಫುಲ್ ವೈರಲ್ ಆಗಿದ್ದರು. ಈಗ ಮತ್ತೊಮ್ಮೆ ಡೈಲಾಗ್ ಗಳನ್ನು ಹೇಳುವ ಮೂಲಕ ಮತ್ತೆ ಸದ್ದು ಮಾಡಲು ಹೊರಟಿದ್ದಾರೆ.
PublicNext
27/12/2024 07:18 pm