ಚಿಕ್ಕಮಗಳೂರು: ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳ ಧರ್ಮಸ್ಥಳದ ನೇತ್ರಾವತಿ ನದಿಯ ಉಪನದಿ ಮೃತ್ಯುಂಜಯ ಹೊಳೆಗೆ ದುಷ್ಕರ್ಮಿಗಳು ಗೋ ಮಾಂಸ ತ್ಯಾಜ್ಯವನ್ನು ಎಸೆದಿರುವ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಬರೀ ನೇತ್ರಾವತಿ ಮಾತ್ರವಲ್ಲ ರಾಜ್ಯದ ಉದ್ದಗಲಕ್ಕೂ ಇದೇ ಪರಿಸ್ಥಿತಿ ಇದೆ. ಧರ್ಮಸ್ಥಳ ಲಕ್ಷಾಂತರ ಭಕ್ತರು ಬರುವ ಧಾರ್ಮಿಕ ಸ್ಥಳ, ಧಾರ್ಮಿಕ ಕ್ಷೇತ್ರವನ್ನು ಅಪವಿತ್ರ ಮಾಡಬೇಕು ಅನ್ನೋದು ದುಷ್ಟರ ಮನಸ್ಥಿತಿಯ ಮತಾಂದತೆ ತೋರಿಸುತ್ತೆ. ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಇದೆಯೋ ಇಲ್ಲವೋ? ಗೋ ಹತ್ಯೆ ಕಾಯ್ದೆಯನ್ನು ಸರ್ಕಾರ ಸರಿಯಾಗಿ ಅನುಷ್ಠಾನ ಮಾಡಿಲ್ಲ. ಗೋಕಳ್ಳರು ರಸ್ತೆ ಕೊಟ್ಟಿಗೆಯಲ್ಲಿರುವ ಹಸುಗಳನ್ನು ಬಿಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗೋಕಳ್ಳರು ನಮ್ದೇ ಸರ್ಕಾರ ಅಂತ ರಾಜರೋಷವಾಗಿ ಗೋ ಹತ್ಯೆ ಹಾಗೂ ಗೋ ಕಳ್ಳತನ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
PublicNext
02/01/2025 02:36 pm