ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಭಗವಾ ಧ್ವಜದ ಸ್ಟೇಟಸ್; ಎಂಟು ಜನರ ವಿರುದ್ಧ ಪ್ರಕರಣ

ಮಹಾನವಮಿ ಹಿನ್ನೆಲೆಯಲ್ಲಿ ದುರ್ಗಾಮಾತಾ ಗೌಡ ಮೆರವಣಿಗೆ ಹೊಗುತ್ತಿರುವಾಗ ಪ್ರಾರ್ಥನಾ ಮಂದಿರ ಮೇಲೆ ಭಗವಾ ಧ್ವಜ ಹಾರಿಸಿದ ಪೋಟೊ ಎಡಿಟ್ ಮಾಡಿ ಅದನ್ನು ಮೊಬೈಲ್‌ ಫೋನ್‌ನಲ್ಲಿ ಸ್ಟೇಟಸ್‌ ಇಟ್ಟಿದ್ದ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಲೂಕಿನ ಕರೋಶಿ ಗ್ರಾಮದಲ್ಲಿ ಮಂಗಳವಾರ ದುರ್ಗಾಮಾತಾ ದೌಡ ಹೋಗುತ್ತಿರುವಾಗ ಅಲ್ಲಿನ ಪ್ರಾರ್ಥನಾ ಮಂದಿರದ ಹತ್ತಿರ ಕೆಲವರು ಪೋಟೊ ತೆಗೆದು ಪ್ರಾರ್ಥನಾ ಮಂದಿರದ ಮೇಲೆ ಭಗವಾ ಧ್ವಜ ಹಾರಿಸಿದ ಫೋಟೊ ಎಡಿಟ್ ಮಾಡಿ ಮೊಬೈಲ್‌ ಫೋನ್‌ನಲ್ಲಿ ಸ್ಟೇಟಸ್‌ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ತಡ ರಾತ್ರಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಕೋಮು ಪ್ರಚೋದನೆ ಉದ್ದೇಶಕ್ಕಾಗಿಯೇ ನಿಂದನೆ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಈ ಕುರಿತು ಕೆಲ ಕಾಲ ಕರೋಶಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪತಿಶೀಲನೆ ನಡೆಸಿ ಎರಡು ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಸಿ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

Edited By :
PublicNext

PublicNext

06/10/2022 08:07 pm

Cinque Terre

34.72 K

Cinque Terre

0

ಸಂಬಂಧಿತ ಸುದ್ದಿ