ಚಿಕ್ಕೋಡಿ:ಅನ್ಯ ಭಾಷೆಗಳನ್ನು ದ್ವೇಷಿಸದೆ, ಕನ್ನಡ ನಾಡು-ನುಡಿ ರಕ್ಷಣೆಗೆ ನವ ಕರ್ನಾಟಕ ಯುವಶಕ್ತಿಯ ಸಂಘಟನೆಯ ಉದ್ದೇಶವಾಗಿದೆ ಎಂದು ರಾಜ್ಯಾಧ್ಯಕ್ಷರಾದ ಕೆ.ಎನ್ ಲಿಂಗೇಗೌಡರು ಹೇಳಿದರು.
ಅವರು ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ನವ ಕರ್ನಾಟಕ ಯುವಶಕ್ತಿಯ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ಬೆಳಗಾವಿ ಜಿಲ್ಲೆ ಎಂದರೆ ಹೆಮ್ಮೆಯ ಸಂಗತಿವಾಗಿದೆ.ಇಲ್ಲಿ ಸಂಗೊಳ್ಳಿ ರಾಯಣ್ಣ ,ಕಿತ್ತೂರು ಚೆನ್ನಮ್ಮಯವರು ಜನ್ಮ ತಾಳಿದ ಪವಿತ್ರ ಭೂಮಿ. ಇಂತಹ ಭೂಮಿಯಲ್ಲಿ ನಾವು ನೂತನ ಘಟಕವನ್ನು ಪ್ರಾರಂಭಿಸಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದರು. ಕರ್ನಾಟಕದ ಗಡಿ ಭಾಗದಲ್ಲಿ ಒಂದು ಸಾವಿರದ ಹಿಂದೆ ಕರ್ನಾಟಕದ ಅವಿಭಾಜ್ಯ ಅಂಗವಾಗಿತ್ತು. ಈ ಇತಿಹಾಸವನ್ನು ಜನರಿಗೆ ತಿಳಿಸುವ ನಮ್ಮ ಉದ್ದೇಶವಾಗಿದೆ. ಕನ್ನಡದ ಅನ್ನ, ನೀರು, ತಿಂದು ಇವತ್ತು ಕನ್ನಡಕ್ಕೆ ದ್ರೋಹ ಮಾಡುತ್ತಿರುವ ಎಂಇಎಸ್ ಹಾಗೂ ಶಿವಶೇನೆ ಪುಂಡಾಟಕೆಯನ್ನು ನಿಲ್ಲಿಸಬೇಕು, ಇಲ್ಲವಾದರೆ ನಮ್ಮ ಎಲ್ಲ ಕನ್ನಡಪರ ಸಂಘಟನೆಗಳು ಸೇರಿ ಅವರಿಗೆ ತಕ್ಕ ಪಾಠವನ್ನು ಕಲಿಸುತ್ತೇವೆ ಎಂದರು. ಬೆಳಗಾವಿ ಯಾವತ್ತು ಕರ್ನಾಟಕದ ಆಸ್ತಿ. ಮಹಾಜನ ವರದಿ ಅಂತಿಮ ಎಂದರು.
ಬಳಿಕ ಬೆಳಗಾವಿಯ ಜಿಲ್ಲಾಧ್ಯಕ್ಷರಾದ ಸಂಜಯ ಪಾಟೀಲ ಹಾಗೂ ಜಕನೂರ ಮಠದ ಗಜಾನನ ಅಪ್ಪಾಜಿಗೋಳ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಸಿದ್ದಮಲ್ಲ ಮಂಜುನಾಥ,ಚಿಕ್ಕೋಡಿ ಜಿಲ್ಲಾಧ್ಯಕ್ಷರಾದ ಬಸವರಾಜ ಸಾಜನೆ,ಸತೀಶ ಚಿಂಗಳೆ,ರವಿ ನಾಯಿಕ,ಆನಂದ ಜುಮ್ಮಾ,ವಿಠ್ಠಲ ಸ್ವಾಮಿ,ವಿಜಯ ಬ್ಯಾಳಿ,ರಾಹುಲ ವಾಳಕೆ,ಅಶಪಕ ಸಯ್ಯದ,ಸಿದ್ದು ಕಾಂಬಳೆ,ಮಾಂತೇಶ ಗುಡಿಮನಿ,ಈಶ್ವರ ಗದ್ದಿ,
ರೋಹಿತ ಸಾಜನೆ,ಸಾಹಿನಿ ಮುಲಾನಿ,ಮಹೇಶ ಕಾಂಬಳೆ,ಸಂಜು ಕರೆನ್ನವರ,ಸಹಿಲ ಬೇಪಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..
Kshetra Samachara
06/12/2024 11:44 am