ಬೆಳಗಾವಿ: ಹಿಂದಿನ ಸರ್ಕಾರ ಕೆಡವಿದ ರಮೇಶ ಜಾರಕಿಹೊಳಿಗೆ ಈ ಸರ್ಕಾರ ಕೆಡವುದು ದೊಡ್ಡ ಮಾತೇನಲ್ಲ, ಒಂದು ಬಾರಿ ಬೈಪಾಸ್ ಸರ್ಜರಿ ಮಾಡಿದವನಿಗೆ ಎರಡನೇ ಬಾರಿಗೆ ಬೈಪಾಸ್ ಸರ್ಜರಿ ಮಾಡೊದು ಕಷ್ಟವಲ್ಲ, ಹಾಗಾಗಿ ರಮೇಶ ಜಾರಕಿಹೊಳಿಗೆ ತಿಂಗಳಿಗೊಮ್ಮೆ ಚಾಕಲೇಟ್ ನೀಡುವ ಕೆಲಸ ಬಿಜೆಪಿಯವರು ಮಾಡ್ತಿದ್ದಾರೆ ಎಂದು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ರಮೇಶ ಜಾತಕಿಹೊಳಿ ನೇತೃತ್ವ ವಿಚಾರವಾಗಿ ಸತೀಶ್ ಜಾರಕಿಹೊಳಿ ವ್ಯಂಗ್ಯ ವಾಡಿದ್ದಾರೆ.
ನಗರದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡದ ಅವರು, ಮಂತ್ರಿಗಾಗಿ ರಮೇಶ ಜಾರಕಿಹೊಳಿ ಕಾಯ್ದು ಕುಳಿತು ಕಲ್ಲು ಎಸೆಯಬಾರದು ಅಂತಾ ಚಾಕಲೇಟ್ ತಿನ್ನಿಸುವ ಕೆಲಸ ಆಗ್ತಿದೆ. ರಮೇಶ ಜಾರಕಿಹೊಳಿ ಸಿಟ್ಟಾದ್ರೆ ಏನಾದರೂ ಮಾಡಬಹುದು ಅನ್ನೋ ಭಯ ಬಿಜೆಪಿ ನಾಯಕರಿಗೆ ಇದೆ. ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣಾ ನಡೆಸುವ ಪ್ರಶ್ನೆಯೇ ಇಲ್ಲ. ಬಿಜೆಪಿಯವರು ಯಡಿಯೂರಪ್ಪನವರನ್ನ ನಮ್ಮ ನಾಯಕ ಅಂತಾ ಒಪ್ಪಿಕೊಂಡಿಲ್ಲ. ಇನ್ನೂ ರಮೇಶ ಜಾರಕಿಹೊಳಿ ಯಾವ ಲೆಕ್ಕ ಎಂದು ಸತೀಶ ಬಿಜೆಪಿ ಪಕ್ಷದ ಕುರಿತು ಲೇವಡಿ ಮಾಡಿದರು.
PublicNext
06/10/2022 12:14 pm