ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಂಭಂದಿಸಿದಂತೆ ವಿವಿಧ ಬಗೆಯ ಎಲೆಕ್ಟ್ರಾನಿಕ್ ಡಿವೈಸ್ ಪೂರೈಸುತ್ತಿದ್ದ ಆರೋಪಿಯನ್ನು ಬೆಳಗಾವಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನ ದೇವಸಂದ್ರದ ಮೂಲದ ಮೊಹಮ್ಮದ್ ಅಜೀಮುದ್ದಿನ್ ಬಂದಿತ ವ್ಯಕ್ತಿ. ಈತ ಕೆಪಿಟಿಸಿಎಮ್ ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಪ್ರಕರಣದ ಕಿಂಗ್‌ಪಿನ್ ಸಂಜು ಭಂಡಾರಿ ಹಾಗೂ ಬೆಳಗಾವಿಯ ಇತರರಿಗೆ ಎಲೆಕ್ಟ್ರಾನಿಕ್ ಡಿವೈಸ್ ಪೂರೈಸಿದ್ದ. ಕೋವಿಡ್ ಮಾಸ್ಕ್ ಗಳಲ್ಲಿಯೇ ಇಟ್ಟಿದ್ದರು ಎಲೆಕ್ಟ್ರಾನಿಕ್ ಡಿವೈಸ್
......
ಹೌದು.. N-95 ಮಾಸ್ಕ್, 41 ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸಿದ ಬನಿಯನ್ ಗಳು, 445 ಎಲೆಕ್ಟ್ರಾನಿಕ್ ಇಯರ್ ಪೀಸ್, 554 ವಿವಿಧ ಬಗೆಯ ಚಾರ್ಜಿಂಗ್ ಕೇಬಲ್, 6. ವಾಕಿಟಾಕಿ ಜಪ್ತಿ ಹೀಗೆ ಅತಿ ಸೂಕ್ಷ್ಮ ವಾದ ಹೈಟೆಕ್ ಗ್ಯಾಜೇಟ್ ಡಿವೈಸ್‌ಗಳನ್ನು ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗಲು ಎಲೆಕ್ಟ್ರಾನಿಕ್ ಉಪಕರಣಗಳ ಪೂರೈಕೆ ಮಾಡಿದ್ದ.
ಪ್ರಕರಣದ ಜಾಡು ಹಿಡಿದು ಹೋಗಿದ್ದ ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ ಮಾಡಿ ಪ್ರಮುಖ ಆರೋಪಿಯ ಬಂಧನ ಮಾಡಿದ್ದಾರೆ. ಈ ಡಿವೈಸ್ ಗಳನ್ನ ಈ ಕಿರಾತಕ ಕೇಂದ್ರ-ರಾಜ್ಯ ಸರ್ಕಾರಗಳಿಂದ ಈವರೆಗೆ ನಡೆದ ವಿವಿಧ ನೇಮಕಾತಿ ಪರೀಕ್ಷೆಗಳಿಗೆ ಎಲೆಕ್ಟ್ರಾನಿಕ್ ಡಿವೈಸ್ ಪೂರೈಕೆ ಶಂಕೆ ಇದೀಗ ವ್ಯಕ್ತವಾಗುತ್ತಿದೆ.
ಬೆಂಗಳೂರಿನ ಎಸ್ಪಿ ರಸ್ತೆಯಲ್ಲಿ ‘ಸ್ಪೈ ಜೋನ್’ ಎಲೆಕ್ಟ್ರಾನಿಕ್ ಮಳಿಗೆ ಹೊಂದಿದ್ದ ಆರೋಪಿಯ ಮಳಿಗೆ ಸೀಜ್ ಮಾಡಿ ಆರೋಪಿಯನ್ನು ಇದೀಗ ಬೆಳಗಾವಿಗೆ ಕರೆತಂದಿದ್ದಾರೆ.ಅಕ್ರಮವಾಗಿ ಎಲೆಕ್ಟ್ರಾನಿಕ್ ಸೂಕ್ಷ್ಮ ಉಪಕರಣ ಖರೀದಿಸುತ್ತಿದ್ದ ಈ ಆರೋಪಿ ದೆಹಲಿ, ಹೈದರಾಬಾದ್‌ನ ಡೀಲರ್‌ಗಳಿಂದ ಅಕ್ರಮವಾಗಿ ಉಪಕರಣಗಳ ಖರೀದಿ ಮಾಡಿ ಕಿಂಗ್ ಫಿನ್ ಸಂಜು ಭಂಡಾರಿಗೆ ಪೂರೈಕೆ ಮಾಡುತ್ತಿದ್ದ. ಅವುಗಳನ್ನು ಸಂಜು ಅಭ್ಯರ್ಥಿಗಳಿಂದ ಹಣ ಪಡೆದು ಬ್ಲೂಟೂತ್, ಸ್ಮಾರ್ಟ್ ವಾಚ್ ಪೂರೈಸಿ ಪರೀಕ್ಷೆಗಳಲ್ಲಿ ಅಕ್ರಮ ಮಾಡಲು ನೇರವಾಗುತ್ತಿದ್ದ, ಇದೀಗ ಈ ಡಿವೈಸ್ ಸಪ್ಲಾಯರ್ ನ್ನು ಬೆಳಗಾವಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಆರೋಪಿಯ ಬಂಧನದಿಂದ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಅಕ್ರಮದಲ್ಲಿ ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
PublicNext
09/09/2022 12:03 pm