ಬೆಳಗಾವಿ: ಬೇಕರಿಯೊಂದರಲ್ಲಿ ಎರಡು ದಿನದ ಹಿಂದೆ ಸೇರಿಕೊಂಡಿದ್ದ ನಾಗರ ಹಾವೊಂದನ್ನ ಸ್ಥಳೀಯ ಉರಗ ತಜ್ಞ ಸೆರೆ ಹಿಡಿದು ರಕ್ಷಣೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರ ಗೇಟ್ ಬಳಿ ನಡೆದಿದೆ.
ರಾಜು ಎಂಬುವವರ ಸ್ವೀಟ್ ಮಾರ್ಟ್ ಅಂಗಡಿಯಲ್ಲಿ ಕಳೆದ ಎರಡು ದಿನದ ಹಿಂದೆ ಸೇರಿಕೊಂಡಿದ್ದ ನಾಗರ ಹಾವು ಅಂಗಡಿಯವರನ್ನ ಭಯಗೊಳಿಸಿತ್ತು. ಏನೇ ಮಾಡಿದ್ರು ನಾಗರ ಹಾವು ಮಾತ್ರ ಅಂಗಡಿಯಿಂದ ಹೊರಗಡೆ ಬರ್ತಿರಲಿಲ್ಲ.
ಆದರೆ ನಿನ್ನೆ ತಡ ರಾತ್ರಿ ಸ್ಥಳೀಯ ಉರಗ ತಜ್ಞ ನಾಗರ ಹಾವನ್ನ ಸೆರೆ ಹಿಡಿದು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಎರಡು ದಿನದಿಂದ ಆತಂಕದಲ್ಲಿದ್ದ ಬೇಕರಿ ಮಾಲೀಕರು ನಿರಾಳರಾಗಿದ್ದಾರೆ.
PublicNext
22/09/2022 11:12 am