ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಮತ್ತೊಂದು ಮರ ಬಿತ್ತು..! ತಪ್ಪಿತು ಅನಾಹುತ

ಬೆಳಗಾವಿ: ಮೊನ್ನೆಯಷ್ಟೆ ಬೃಹತ್ ಮರವೊಂದು ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದ ಘಟನೆ ಬಳಿಕ‌ವೂ ಎಚ್ಚತ್ತುಕೊಳ್ಳದ ಅರಣ್ಯ ಇಲಾಖೆ. ಈಗ ಅದೆ ರೀತಿಯಾದ ಮತ್ತೊಂದು ಬೃಹತ್ ಮರವೊಂದು ಬಿದ್ದು ಆಟೋ ಚಾಲಕರು ಪಾರಾಗಿರುವ ಘಟನೆ ಅರಣ್ಯ ಇಲಾಖೆ ಆವರಣದಲ್ಲಿ ನಡೆದಿದೆ.

ಬೆಳಗಾವಿಯಲ್ಲಿ ಮತ್ತೊಂದು ಬೃಹದ್ದಾಕಾರದ ಮರ ಬಿದ್ದು ಎರಡು ಆಟೋ, ಇನ್ನೋವಾ ಕಾರು ಜಖಂವಾಗಿರುವ ಘಟನೆ ನಡೆದಿದೆ. ಘಟನೆಯು ಬೆಳಗಾವಿಯ ಅರಣ್ಯ ಇಲಾಖೆ ಕಚೇರಿ ಆವರಣದೊಳಗೆ ನಡೆದಿದ್ದು ಅದೃಷ್ಟವಶಾತ್ ಆಟೋ ಚಾಲಕ ಸೇರಿದಂತೆ ಇಬ್ಬರೂ ಪ್ರಾಣಾಪಯಾದಿಂದ ಪಾರಗಿದ್ದಾರೆ. ಈ ಮರವು ಬಸ್ ನಿಲ್ದಾಣ ಬಳಿ ಇರುವ ಕಾರಣ ಜನರಲ್ಕಿ ಕೆಲಕ್ಷಣ ಆತಂಕ ಕಂಡು ಬಂತು.

ಈ ಮೊದಲು ಸರ್ಕಾರಿ ಬಸ್ ಹಿಂಭಾಗ ಮೇಲೆ ಬಿದ್ದು ಬಳಿಕ ಅಲ್ಲಿಯೇ ನಿಂತಿದ್ದ ಆಟೋಗಳ ಮೇಲೆ ಈ ಮರ ಉರುಳಿದೆ. ಸುದ್ದಿ ತಿಳಿದ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಮರವನ್ನು ತೆರುವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು

Edited By : Manjunath H D
PublicNext

PublicNext

15/09/2022 04:56 pm

Cinque Terre

35.24 K

Cinque Terre

0

ಸಂಬಂಧಿತ ಸುದ್ದಿ