ಬೈಲಹೊಂಗಲ: ಈಜಲು ಹೋಗಿ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೈಲಹೊಂಗಲ ತಾಲೂಕಿನ ಮೊಹರೆ ಗ್ರಾಮದಲ್ಲಿರುವ ಯಶವಂತಗೌಡ ಪಾಟೀಲ ಎಂಬುವರ ಬಾವಿಯಲ್ಲಿ ನಡೆದಿದೆ. ಬೋರಪ್ಪ ಯಲ್ಲಪ್ಪ ತಳವಾರ (62) ಬಾವಿಯಲ್ಲಿ ಈಜಲು ಹೋಗಿ ಮೃತಪಟ್ಟ ವ್ಯಕ್ತಿ
ಶುಕ್ರವಾರ ಬೋರಪ್ಪ ಯಲ್ಲಪ್ಪ ತಳವಾರ ಗ್ರಾಮದಲ್ಲಿರುವ ಯಶವಂತಗೌಡ ಪಾಟೀಲ ಎಂಬುವರ ಬಾವಿಯಲ್ಲಿ ಈಜಲು ಹೋಗಿದ್ದಾನೆ. ಸುಮಾರು 30- 40 ಅಡಿ ಆಳ ಇದ್ದುದ್ದರಿಂದ ನೀರಿನಲ್ಲಿ ಮುಳುಗಿ ಹೋಗಿದ್ದಾನೆ. ನಂತರ ಮನೆಯವರು ಭಯಗೊಂಡು ಊರಲ್ಲಿ ಹುಡುಕಾಡಿ ಗ್ರಾಮದ ಬಾವಿಯ ದಡದ ಮೇಲೆ ಬಟ್ಟೆಗಳನ್ನು ನೋಡಿ ಗಾಬರಿಗೊಂಡು ಓಡಿ ಹೋಗಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.
ಪೊಲೀಸರಿಗೆ ಶುಕ್ರವಾರ ಮಾಹಿತಿ ನೀಡಿದ್ದು, ಪೊಲೀಸ್ ಸಿಬ್ಬಂದಿ ಅಗ್ನಿಶಾಮಕ ದಳದ ಜೊತೆ ಬಾವಿಯ ಬಳಿ ಹೋಗಿ ಶವಕ್ಕಾಗಿ ಶೋಧ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಆದರೆ, ಶುಕ್ರವಾರ ಕತ್ತಲಾಗಿದ್ದರಿಂದ ಹುಡುಕಾಟ ಮಾಡಲು ಸಾಧ್ಯವಾಗದೆ ಇಂದು ರವಿವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಶವ ಪತ್ತೆಯಾಗಿದೆ.
ಸರಕಾರಿ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ಸಂಬಂಧಿಕರಿಗೆ ನೀಡಲಾಯಿತು. ಈ ಘಟನೆಯ ಸಂಬಂಧ ನೇಸರಗಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ
ಈ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ಎಸ್ ಎಸ್ ವಾಲಿಶೆಟ್ಟಿ, ರಾಮಣ್ಣ ಬಂಡಿವಡ್ಡರ, ಆನಂದ ಮಾದರ, ಬಾಳಪ್ಪ ತಿಳಗಂಜಿ, ಅರುಣ ಅಂಗಡಿ, ಶಿವಪ್ಪ ಅಂಬಗಿ, ಮಲ್ಲಿಕಾರ್ಜುನ ದಮ್ಮಸೂರ, ನೇಸರಗಿ ಪೋಲಿಸ್ ಠಾಣೆಯ ಪಿಎಸ್ಐ ವೈ .ಎಲ್. ಶೀಗಿಹಳ್ಳಿ, ವಿನಾಯಕ ಯರಗಟ್ಡಿಮಠ, ಎಸ್ ಆರ್ ಮುರಗೋಡ, ಬಿ ಎಮ್ ಮಠದ, ಗ್ರಾಮಸ್ಥರಾದ ಅಬ್ಬಾಸ ಅಲಿ ಪೀರಜಾದೆ, ದೊಡ್ಡಪ್ಪ ಬೆಳವಡಿ, ಬಸಪ್ಪ ಮಾರಿಹಾಳ, ಬೋರಪ್ಪ ತಳವಾರ, ದೊಡ್ಡಪ್ಪ ತಳವಾರ, ಅಡಿವೇಪ್ಪ ಸುಲದಾಳ ಮತ್ತಿತರರು ಇದ್ದರು.
PublicNext
08/12/2024 07:49 pm