ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕಂದಕಕ್ಕೆ ಜಾರಿದ ಸರ್ಕಾರಿ ಬಸ್ - ತಪ್ಪಿದ ಭಾರಿ ಅನಾಹುತ

ಬೆಳಗಾವಿ: ಕಂದಕಕ್ಕೆ ಸರ್ಕಾರಿ ಬಸ್ ಜಾರಿ ಬಿದ್ದಿದ್ದು, ಭಾರಿ ಅನಾಹುತ ಸ್ವಲ್ಪದರಲ್ಲೆ ತಪ್ಪಿದೆ. ಈ ಘಟನೆ ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ನಡೆದಿದೆ.‌

ಬೆಳಗಿನ ಜಾವಾ ನಾವಗೆ ಗ್ರಾಮದ ಕಡೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಸ್ ಜಾರಿ ಬಿದ್ದಿದೆ. ಬಸ್ ನಲ್ಲಿ ನಾಲ್ಕು ಜನ ಪ್ರಯಾಣಿಕರು ತೆಗೆದುಕೊಂಡು ಹೋಗುವಾಗ ಈ ಅವಘಡ ಸಂಭವಿಸಿದೆ.‌ ನಾವಗೆ ಗ್ರಾಮದಿಂದ ಬೆಳಗಾವಿಯತ್ತ ವಾಪಸ್ಸ ಬರಬೇಕಿದ್ದ ಬಸ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿಲ್ಲದೇ ಇರುವ ಹಿನ್ನೆಲೆ ಬಾರಿ ಅನಾಹುತ ತಪ್ಪಿದೆ.‌ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Abhishek Kamoji
Kshetra Samachara

Kshetra Samachara

05/12/2024 11:29 am

Cinque Terre

15.12 K

Cinque Terre

0

ಸಂಬಂಧಿತ ಸುದ್ದಿ