ಬೆಳಗಾವಿ: ನರೇಗಾ ಯೋಜನೆಯಡಿ ಬೈಲಹೊಂಗಲ ತಾಲೂಕಿನ ತುರಕರಶೀಗಿಹಳ್ಳಿ ಗ್ರಾಮದಲ್ಲಿ ದುಡಿಯೋಣ ಬಾ ಹಾಗೂ ಜಲಶಕ್ತಿ ಅಭಿಯಾನದಡಿ ನಿರ್ಮಾಣವಾದ ಹೊಸ ಕೆರೆ ದನಕರುಗಳ, ಕುರಿಗಾಹಿಗಳ ನೀರಿನ ಭವನೆ ನೀಗಿಸುತ್ತಿದೆ.
ತುರಕರಶೀಗಿಹಳ್ಳಿ ಗ್ರಾ.ಪಂ.ವ್ಯಾಪ್ತಿಯ 2021-22 ನೇ ಸಾಲಿನಲ್ಲಿ ಗ್ರಾಮಕ್ಕೊಂದು ಹೊಸ ಕೆರೆ ನಿರ್ಮಾಣ ಮಾಡುವ ಗುರಿ ಇಟ್ಟುಕೊಂಡು ಗೋಮಾಳ ಜಾಗೆಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರು ಹೊಸ ಕೆರೆ ನಿರ್ಮಿಸಿದ್ದರಿಂದ ದನಕರಗಳ ನೀರಿನ ದಾಹ ನೀಗಿಸುತ್ತಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯ ಈ 4 ಎಕರೆ ವಿಸ್ತೀರ್ಣದ ಕೆರೆ ಇದೆ. ಈ ಗ್ರಾಮದಲ್ಲಿ ನೀರಾವರಿ ಸೌಲಭ್ಯ ಇಲ್ಲದ್ದರಿಂದ ಒಣ ಬೇಸಾಯವನ್ನೇ ನಂಬಿಕೊಂಡು ಜೀವನ ಕಳೆಯುತ್ತಿದ್ದಾರೆ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೆರೆಯಲ್ಲಿ ನೀರು ಸಂಗ್ರಹಗೊಂಡಿದ್ದು ಈ ಭಾಗದ ರೈತರು ಖುಷಿಯಲ್ಲಿದ್ದಾರೆ. ಗ್ರಾಮದಲ್ಲಿ ರೈತಾಪಿ ಕುಟುಂಬಗಳು ಹೆಚ್ಚಾಗಿದ್ದು, ಇವರು ಕೃಷಿ ಜೊತೆಗೆ ಜಾನುವಾರು, ಕುರಿ ಸಾಕಾಣಿಕೆಯೂ ಮಾಡುತ್ತಿದ್ದಾರೆ.
ಇದೀಗ ಕೆರೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ದನಕರ, ಮೇಕೆ, ಕುರಿಗಳ ನೀರಿನ ದಾಹ ನೀಗುತ್ತಿದೆ. ಜೊತೆಗೆ ಹಲವಾರು ಪಕ್ಷಿಗಳು ಸಹ ಕೆರೆ ಅಂಗಳದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿವೆ.ಕೆರೆ ಸುತ್ತಲಿನ ಬೋರ್ ವೆಲಗಳು ರಿಚಾರ್ಜ್ ಗೊಂಡಿವೆ. ವ್ಯರ್ಥವಾಗಿ ಹರಿಯುವ ನೀರನ್ನು ಜಲಶಕ್ತಿ ಅಭಿಯಾನದಡಿ ಹಿಡಿದಿಟ್ಟಿದ್ದರಿಂದ ಕೆರೆ ನೀರು ಭೂಮಿಗೆ ಇಂಗುತ್ತಿದೆ. ಇದರಿಂದ ಅಂತರ್ಜಲ ವೃದ್ಧಿಗೆ ನೆರವಾಗಿದೆ. ಒಣ ಬೇಸಾಯಕ್ಕೆ ಸೀಮಿತವಾಗಿದ್ದ ರೈತರು ಲಾಭದಾಯಕ ಬೆಳೆ ಬೆಳೆಯುತ್ತಿದ್ದು ರೈತರ ದಿಲ್ ಖುಷ್ ಆಗಿದ್ದಾರೆ.
Kshetra Samachara
29/09/2022 11:20 am