ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ವಿಟಿಯು ಕುಲಪತಿಯಾಗಿ ಪ್ರೊ.ವಿದ್ಯಾಶಂಕರ್ ನೇಮಕ

ಬೆಳಗಾವಿ: ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ನೂತನ ಕುಲಪತಿಗಳಾಗಿ ಡಾ. ವಿದ್ಯಾ ಶಂಕರ್.ಎಸ್ ನೇಮಕಗೊಂಡಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಆದೇಶದ ಮೇರೆಗೆ ಡಾ. ವಿದ್ಯಾ ಶಂಕರ ಅವರು ನೇಮಕವಾಗಿದ್ದು, ಮುಂದಿನ ಮೂರು ವರ್ಷ ಅವರು ಈ ಹುದ್ದೆಯಲ್ಲಿ ಇರಲಿದ್ದಾರೆ.

ಪ್ರಸಕ್ತ ಕರ್ನಾಟಕ ರಾಜ್ಯ ಮುಕ್ತ ವಿವಿಯ ಕುಲಪತಿ ಆಗಿರುವ ಡಾ. ವಿದ್ಯಾ ಶಂಕರ್ ಅವರು ಸೆಪ್ಟೆಂಬರ್ 30ರಂದು ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ವಿಟಿಯುನ ಪ್ರಸಕ್ತ ಕುಲಪತಿಗಳಾಗಿರುವ ಪ್ರೊ. ಕರಿಸಿದ್ದಪ್ಪ ಅವರು 2016 ಸೆ. 24ರಿಂದ ಅಧಿಕಾರದಲ್ಲಿದ್ದಾರೆ. ಎರಡು ಅವಧಿಗೆ ವಿಟಿಯುನ ಕುಲಪತಿ ಆಗಿದ್ದ ಪ್ರೊ. ಕರಿಸಿದ್ದಪ್ಪ ಅವರು ಸೆ.30 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

Edited By : Vijay Kumar
PublicNext

PublicNext

30/09/2022 02:45 pm

Cinque Terre

13.54 K

Cinque Terre

0

ಸಂಬಂಧಿತ ಸುದ್ದಿ