ಬೆಳಗಾವಿ: ಬೆಳಗಾವಿ ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಸುವರ್ಣ ವಿಧಾನಸೌದ ಮುಂದೆ ರಾಣಿ ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾನ ಬೇಡಿಕೆಗೆ ಸ್ಪಂಧಿಸಿದ ಸಿಎಮ್ ಶೀಘ್ರದಲ್ಲೇ ಮೂರ್ತಿಗಳ ಪ್ರತಿಷ್ಠಾನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸಿಎಮ್ ಬೊಮ್ಮಾಯಿ ಕಿತ್ತೂರು ಉತ್ಸವದ ವೀರ ಜ್ಯೋತಿಯನ್ನ ಚಾಲನೆ ನೀಡುವ ಸಂದರ್ಭದಲ್ಲಿ ಈ ಬಗ್ಗೆ ತಿಳಿಸಿದ್ದಾರೆ. ಈ ಹಿನ್ನಲೆ ಕುಂದಾನಗರಿಯ ಕನ್ನಡ ಪರ ಸಂಘಟನೆಗಳು ಬೆಳಗಾವಿಯ ಚನ್ನಮ್ಮ ವೃತ್ತದ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ್ದಾರೆ. ಕರವೇ ಜಿಲ್ಲಾದ್ಯಕ್ಷ ದೀಪಕ ಗುಡನಟ್ಟಿ ಹಾಗೂ ವಿವಿಧ ಸಂಘಟನೆಯ ಪದಾದಿಕಾರಿಗಳು ಚನ್ನಮ್ಮ ವೃತದ ಬಳಿ ಕುಣಿದು ಕುಪ್ಪಳಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
PublicNext
02/10/2022 09:44 pm