ಬೈಲಹೊಂಗಲ: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಡರಾಗಲು ಸಾಧ್ಯ ಎಂದು ಮುರಗೋಡ ಠಾಣೆ ಸಿಪಿಐ ಐ ಎಂ ಮಠಪತಿ ಹೇಳಿದರು.
ಅವರು ಶನಿವಾರ ಸಮೀಪದ ಮರಕುಂಬಿಯ ಗಣಾಚಾರಿ ಪ್ರಾಥಮಿಕ ಹಾಗೂ ಪ್ರೌಡಶಾಲೆ ಮತ್ತು ರೂರಲ್ ಕಾನ್ವೇಂಟ ಶಾಲೆಯ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಪಾಠಗಳ ಜೊತೆಗೆ ಆಟವೂ ತುಂಬಾ ಮುಖ್ಯ ಎಂದರು.
ಸಂಸ್ಥೆಯ ಅಧ್ಯಕ್ಷ ಬಿ.ಬಿ.ಗಣಾಚಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಗಳಲ್ಲಿಯೂ ಶ್ರಮವಹಿಸಿ ಶ್ರದ್ಧೆಯಿಂದ ತೊಡಗಿಸಿಕೊಂಡರೆ ರಾಷ್ಟ್ರೀಯ ಅಷ್ಟೇ ಅಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸಾಧನೆ ಮಾಡಿ ಜೀವನ ರೂಪಿಸಿಕೊಳ್ಳಬಹುದು ಎಂದರು.
ವೇದಿಕೆ ಮೇಲೆ ರೈತ ಮುಖಂಡ ಮಹಾಂತೇಶ ಕಮತ, ಮಲ್ಲಿಕಾರ್ಜುನ ಗೌಡತಿ, ಶಂಕರಪ್ಪ ಸೊಗಲದ, ಸತೀಶ ಸಣ್ಣಮನಿ, ಗೋವಿಂದರಾಜ ಬುರ್ಲಿ, ಮುಖ್ಯಶಿಕ್ಷಕ ಎಸ್.ಎಂ.ಅಂಬರಶೆಟ್ಟಿ, ಎಂ.ಸಿ.ಕಾಜಗಾರ ಇದ್ದರು.
ಆರ್.ಕೆ.ಚಾಪಗಾಂವ ನಿರೂಪಿಸಿದರು, ವಿಕಾಸಗೌಡ ಸಂಗನಗೌಡ ಸ್ವಾಗತಿಸಿದರು, ಗಣೇಶ ಹೊಸೂರ ವಂದಿಸಿದರು.
Kshetra Samachara
14/12/2024 03:59 pm