ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಅರಣ್ಯ ಪ್ರದೇಶದಲ್ಲಿ ಯುವಕನ ಶವ ಪತ್ತೆ ಕೇಸ್‍ನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಚಿಕ್ಕೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದೇ ಅಕ್ಟೋಬರ್ 7ರಂದು ಬೆಳಿಗ್ಗೆ ಕೊಳೆತ ಸ್ಥಿತಿಯಲ್ಲಿ ಯುವಕನೋರ್ವನ ಶವ ಪತ್ತೆಯಾಗಿತ್ತು. ಮೃತ ಯುವಕ ಸುನೀಲ ಸಾಳುಂಕೆ (25) ಎಂದು ಗುರುತಿಸಲಾಗಿತ್ತು. ಬಳಿಕ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ತನಿಖೆ ಕೈಗೊಂಡಿದ್ದ, ಚಿಕ್ಕೋಡಿ ಪೊಲೀಸರು ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸಂಬಂಧ ಎಸ್ಪಿ ಡಾ.ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದು, ಇದೇ ಅಕ್ಟೋಬರ್ 7ರಂದು ಚಿಕ್ಕೋಡಿ ಪೊಲೀಸ್ ಠಾಣೆಗೆ ಬಂದು ಕೊಲೆಯಾದವನ ತಾಯಿ ತನ್ನ ಮಗನ ಕೊಲೆ ಆರೋಪದ ಬಗ್ಗೆ ಒಂದು ದೂರು ದಾಖಲಿಸಿದ್ದರು. ಕೊಲೆಯಾದ ವ್ಯಕ್ತಿ ಇತ್ತಿಚೆಗಷ್ಟೇ ಮದುವೆ ಆಗಿತ್ತು. ಆತನಿಗೆ ಮಹಾಂತೇಶ ಎಂಬ ಸ್ನೇಹಿತನಿದ್ದ, ಮಹಾಂತೇಶನ ಹೆಂಡತಿ ಜೊತೆಗೆ ನನ್ನ ಹಿರಿಯ ಮಗ ಅಸಭ್ಯವಾಗಿ ವರ್ತಿಸಿದ್ದ. ಹೀಗಾಗಿ ಇಬ್ಬರ ನಡುವೆ ಜಗಳ ಆಗಿತ್ತು. ಇದು ಊರಿನಲ್ಲಿ ಎಲ್ಲರಿಗೂ ಗೊತ್ತಿತ್ತು. ಇದಾದ ಬಳಿಕ ಇವರು ಮತ್ತೆ ಸರಿಹೊಂದಿ ಮೊದಲಿನಂತೆ ಅನ್ಯೋನ್ಯವಾಗಿದ್ದರು.
ಆದರೆ ಅಕ್ಟೋಬರ್ 2ರಂದು ಬೆಳಿಗ್ಗೆ ಮಹಾಂತೇಶ ಮನೆಗೆ ಬಂದು ಹಿರಿಯ ಮಗನನ್ನು ಕರೆದುಕೊಂಡು ಹೋಗಿರುತ್ತಾನೆ. ಮರಳಿ ಬಂದಿರುವುದಿಲ್ಲ, ಆದರೆ ಇನ್ನು ಅಕ್ಟೋಬರ್ 7ರಂದು ಬೆಳಿಗ್ಗೆ ಕರೋಶಿ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಶವವಾಗಿ ಇತ ಪತ್ತೆಯಾಗಿದ್ದ ಈ ಬಗ್ಗೆ ಮೃತ ಯುವಕನ ತಾಯಿ ಚಿಕ್ಕೋಡಿ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತು ಚಿಕ್ಕೋಡಿ ಠಾಣೆ ಸಿಪಿಐ ಆರ್.ಆರ್.ಪಾಟೀಲ್ ನೇತೃತ್ವದ ತಂಡವು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಾಂತೇಶ ತಳವಾರ, ರಾಜು ದೊಡಮನಿ ಬಂಧಿತ ಆರೋಪಿಗಳು.
ಈ ಬಗ್ಗೆ ಇನ್ನು ಕೋಪದಲ್ಲಿ ಇದ್ದ ಮಹಾಂತೇಶ ಮೃತ ಸುನೀಲ್‌ನನ್ನು ತನ್ನ ಅಳಿಯಾ ರಾಜು ಸೇರಿಕೊಂಡು ಬೆಳಿಗ್ಗೆ ಬಂದು ಬೈಕ್‍ನಲ್ಲಿ ಕರೆದುಕೊಂಡು ಕರೋಶಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಕುಳಿತುಕೊಂಡು ಸಾರಾಯಿ ಕುಡಿದಿದ್ದರು. ಈ ವೇಳೆ ಸುನೀಲ್‌ಗೆ ಪ್ರತಿದಿನಕ್ಕಿಂತ ಹೆಚ್ಚು ಸಾರಾಯಿ ಕುಡಿಸಿ, ಬಳಿಕ ಆತನ ಕತ್ತಿಗೆ ನೈಲಾನ್ ದಾರದಿಂದ ಎಳೆದು ಉಸಿರುಗಟ್ಟಿಸಿ ಕೊಲೆ ಮಾಡಿ, ಬೈಕ್‌ನ್ನ ಅಲ್ಲಿಂದ 200 ಮೀಟರ್ ವ್ಯಾಪ್ತಿಯಲ್ಲಿ ಮರಗಳ ಪೊದೆಯಲ್ಲಿ ಮುಚ್ಚಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
PublicNext
12/10/2022 04:14 pm