ಹುಕ್ಕೇರಿ: ಬೆಳಗಾವಿ ಜಿಲ್ಲೆಯ ಶಿರಢಾಣ ಹಾಗೂ ಝಾಂಗಟಿಹಾಳ ಬಳಿ ಘಟಪ್ರಭಾ ನದಿಯಲ್ಲಿ ಬಾಲಕನ ರುಂಡವಿಲ್ಲದ ಅಪರಿಚಿತ ಶವ ತೇಲಿ ಬಂದಿದೆ.
12ರಿಂದ 15 ವರ್ಷದ ಬಾಲಕನ ರುಂಡವಿಲ್ಲದ ಶವ ಪತ್ತೆಯಾಗಿದ್ದು, ಯಾರೋ ದುಷ್ಕರ್ಮಿಗಳು ಗೋಣಿ ಚೀಲದಲ್ಲಿ ಬಾಲಕನ ಶವ ಕಟ್ಟಿ ನದಿಗೆ ಎಸೆದಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಇದು ಯಾರ ಶವ ಎಂದು ಪತ್ತೆಯಾಗಿಲ್ಲ. ಸ್ಥಳಕ್ಕೆ ಹುಕ್ಕೇರಿ ಪೊಲೀಸರ ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
20/09/2022 10:17 pm