ಬೆಳಗಾವಿ: ರಗ್ಗು ಮಾರುವ ನೆಪದಲ್ಲಿ ಬಂದು ಸರಗಳ್ಳತನಕ್ಕೆ ಯತ್ನಿಸಿದ ನಾಲ್ವರಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ
ಜಿಲ್ಲೆಯ ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ರಗ್ಗು ಮಾರುವ ನೆಪದಲ್ಲಿ ಬಂದು ಸರಗಳ್ಳತನಕ್ಕೆ ಯತ್ನಿಸಿದ ನಾಲ್ವರಿಗೆ ಗ್ರಾಮಸ್ಥರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ರಗ್ಗು ಮಾರುವ ನೆಪದಲ್ಲಿ ಮನೆಮನೆಗೆ ತೆರಳಿ ಉದ್ರಿ ಮೂಲಕ ರಗ್ಗು ಕೊಡುವುದಾಗಿ ಹೇಳುತ್ತ ಓರ್ವ ಕೊರಳಿನ ಸರ ಕದಿಯಲು ಯತ್ನಿಸಿದಾಗ ಅಕ್ಕಪಕ್ಕದವರು ಸೇರಿ ಆರೋಪಿಗಳನ್ನು ಹಿಡಿದು ಏಟು ನೀಡಿದ್ದಾರೆ.
ನಂತರ ನಂದಗಡ ಪೊಲೀಸರಿಗೆ ಇಟಗಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
PublicNext
11/09/2022 12:22 pm