ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆರೆಯಲ್ಲಿ ಮುಳುಗಿ ಯುವಕ ಸಾವು

ಖಾನಾಪೂರ : ಮೀನು ಹಿಡಿಯಲು ಕೆರೆಗೆ ತೆರಳಿದ್ದ ಯುವಕ ಆಯತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಖಾನಾಪುರ ತಾಲೂಕಿನ ಮಂಗೇನಕೊಪ್ಪ ಗ್ರಾ ಪಂಚಾಯಿತಿ ವ್ಯಾಪ್ತಿಯ ಕಾಳಮ್ಮನಗರದ ಬಳಿಯ ಕೆರೆಯಲ್ಲಿ ಬುಧವಾರ ನಡೆದಿದೆ. ಮಂಗೇನಕೊಪ್ಪದ ಮಂಜುನಾಥ ತುಕಾರಾಮ ವಾಣಿ (24) ಮೃತ ಯುವಕ ಮಂಜುನಾಥ ಮಂಗಳವಾರ ತನ್ನ ಕೆಲ ಸ್ನೇಹಿತರ ಜೊತೆ ಸೇರಿ ಕೆರೆಗೆ ಮೀನು ಹಿಡಿಯಲು ತೆರಳಿದ್ದ ಮೀನು ಹಿಡಿಯಲು ಕೆರೆಯಲ್ಲಿ ಇಳಿದಿದ್ದಾಗ ಆಕಸ್ಮಿಕವಾಗಿ ಆಯತಪ್ಪಿ ನೀರಿನಲ್ಲಿ ಮುಳುಗಿದ್ದಾನೆ .

ಆತನಿಗಾಗಿ ಬುಧವಾರ ಮುಂಜಾನೆಯಿಂದಲೇ ನುರಿತ ಈಜುಪಟುಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಯವರ ನೆರವಿನಿಂದ ಶೋಧಕಾರ್ಯ ಕೈಗೊಂಡರೂ ಪ್ರಯೋಜವಾಗಿರಲಿಲ್ಲ.ಬುಧವಾರ ರಾತ್ರಿ ಆತನ ಶವ ಕೆರೆಯಲ್ಲಿ ಪತ್ತೆಯಾಗಿದ್ದು, ಶವದ ಮರಣೋತ್ತರ ಪರೀಕ್ಷೆಯ ಬಳಿಕ ಮೃತರ ಸಂಬಂಧಿಗಳಿಗೆ ಹಸ್ತಾಂತರಿಸಲಾಗಿದೆ.

ಸ್ಥಳಕ್ಕೆ ಖಾನಾಪೂರ ತಹಶೀಲ್ದಾರ್ ಪ್ರವೀಣ ಜೈನ್ ಕೂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದರು. ಬುಧವಾರ ಕೆರೆಯಲ್ಲಿ ಆತನ ಶವವನ್ನು ಹೊರ ತೆಗೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನುರಿತ ಈಜುಪಟುಗಳ ಯಶಸ್ವಿಯಾಗಿದ್ದಾರೆ.ಈ ವಿಷಯಕ್ಕೆ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವನ್ನ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

13/10/2022 03:47 pm

Cinque Terre

18.6 K

Cinque Terre

0

ಸಂಬಂಧಿತ ಸುದ್ದಿ