ಬೆಳಗಾವಿ: ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಟೇಲರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುಳ್ಳೂರ ಘಾಟ್‌ನಲ್ಲಿ ನಡೆದಿದೆ
ಧಾರವಾಡದ ಕಡೆಯಿಂದ ರಾಮದುರ್ಗ ತಾಲೂಕಿನ ಖಾನಪೇಠದ ಧನಲಕ್ಷ್ಮಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಇದಾಗಿದ್ದು, ಟ್ರ್ಯಾಕ್ಟರ್‌ನ ಹಿಂದಿನ ಟೇಲರ್ ನಿಯಂತ್ರಣ ತಪ್ಪಿ ಘಾಟ್ ನಲ್ಲಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಈ ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಮುಳ್ಳೂರ ಘಾಟ್ ನಲ್ಲಿ ಸಾಕಷ್ಟು ತಿರುವುಗಳಿದ್ದು, ಟ್ರ್ಯಾಕ್ಟರ್ ಹಿಂದಿನ ಟೇಲರ್ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕ ಪಲ್ಟಿಯಾಗಿದೆ.
ನಿಯಂತ್ರಣ ಕಳೆದುಕೊಂಡು ಟೇಲರ್ ಪಲ್ಟಿಯಾದ ತಕ್ಷಣ ಚಾಲಕ ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದಾನೆ ಟೇಲರ್ ನಲ್ಲಿ ತುಂಬಿದ್ದ ಕಬ್ಬು ಸಂಪೂರ್ಣ ರಸ್ತೆ ಪಕ್ಕಕೆ ಬಿದ್ದಿದೆ. ಅದೃಷ್ಟವಶಾತ್ ಟ್ರ್ಯಾಕ್ಟರ್ ನ ಇಂಜಿನ್ ಹಾಗೂ ಮುಂದಿನ ಟೇಲರ್ ಪಲ್ಟಿಯಾಗದೆ ಇದ್ದಿದ್ದರಿಂದ ಅನಾಹುತ ತಪ್ಪಿದಂತಾಗಿದೆ.
PublicNext
13/10/2022 01:01 pm