ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ : ಸಾರಿಗೆ ಬಸ್ ಬೈಕ್ ಭೀಕರ ಅಪಘಾತ , ಬೈಕ್ ಸವಾರ ಸ್ಥಳದಲ್ಲೇ ಸಾವು

ಅಥಣಿ : ಕೆ.ಎಸ್.ಆರ್.ಟಿ‌.ಸಿ ಬಸ್ ಹಾಗೂ ದ್ವಿಚಕ್ರ ವಾಹನಕ್ಕೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸತ್ತಿ ಗ್ರಾಮದ ಹೊರವಲಯದಲ್ಲಿ ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ನಂದೇಶ್ವರ ಗ್ರಾಮದ ಆನಂದ ಯಲ್ಲಪ್ಪ ವಟ್ಟನ್ನವರ (42) ಸ್ಥಳದಲ್ಲಿ ಸಾವನ್ನಪ್ಪಿದ್ದು. ಮಂಜುನಾಥ್ ಗಂಗಪ್ಪ ನಿಡೋಣಿ (25) ಗಂಭೀರ ಗಾಯಗೊಂಡಿದ್ದು ಅಥಣಿ ಸಮುದಾಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಿಂದ ಸತ್ತಿ ಮಾರ್ಗವಾಗಿ ಅಥಣಿ ಪಟ್ಟಣಕ್ಕೆ ಬರುತ್ತಿರುವ ಬಸ್ ಹಾಗೂ ಬೈಕ್ ನಡುವೆ ಸತ್ತಿ ಗ್ರಾಮದ ಹೊರವಲಯದ ಕೆ.ಎಂ.ಎಫ್ ಡೈರಿ ಹತ್ತಿರ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Edited By : Manjunath H D
PublicNext

PublicNext

08/10/2022 05:10 pm

Cinque Terre

28.32 K

Cinque Terre

0

ಸಂಬಂಧಿತ ಸುದ್ದಿ