ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ವಸತಿ ಶಾಲೆಯಲ್ಲಿ ಸಿಲಿಂಡರ್ ಸ್ಫೋಟ; ಧಾನ್ಯ, ಸಾಮಗ್ರಿ ಭಸ್ಮ

ಗೋಕಾಕ : ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಇಂದು ಬಿಸಿಯೂಟ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುತ್ತಿರುವಾಗ ಸಿಲೆಂಡರ್ ಸ್ಫೋಟವಾಗಿ ಕೋಣೆಯ ಬಾಗಿಲು ಸುಟ್ಟು ಹೋಗಿದ್ದು,ಒಳಗೆ ಇರುವ ಬಿಸಿಯೂಟದ ಆಹಾರ ಧಾನ್ಯ ಮುಂತಾದ ಪರಿಕರಗಳಿಗೆ ಸುಟ್ಟು ಹೋಗಿರುವ ಘಟನೆ ಗೋಕಾಕ ತಾಲೂಕಿನಲ್ಲಿ ನಡೆದಿದೆ.

ಅಡುಗೆ ಮಾಡುತ್ತಿರುವಾಗ ಸಿಲೆಂಡರ್ ನಿಂದ ಭಾರಿ ಶಬ್ದ ಬಂದಿದೆ ಇದನ್ನ ಕಂಡು ಅಡುಗೆಯವರು ಹೆದರಿ ಕೋಣೆಯಿಂದ ಹೊರಗೆ ಬಂದಿದ್ದಾರೆ. ಸಿಲಿಂಡರ್ ಸ್ಪೊಟಗೊಂಡ ಕಾರಣ ಕೋಣೆಯ ತುಂಬಾ ಬೆಂಕಿ ಆವರಿಸಿದ್ದು, ಕೋಣೆಯ ಕಿಟಕಿ ಬಾಗಿಲುಗಳು ಸುಟ್ಟು ಹೋಗಿವೆ.

ಶಾಲೆಯಲ್ಲಿರುವ ಅಗ್ನಿ ನಿಂಧಿಸುವ ಗ್ಯಾಸನಿಂದ ಅಗ್ನಿ ನಿಂಧಿಸಲು ಪ್ರಯತ್ನಸಿಲಾಯಿತು. ನಂತರ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದಾಗ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಲ್ಲಿನ ಮುಖ್ಯ ಗುರುಗಳಾದ ವಿಠಲ ಗುಡೇನ್ನವರ ತಿಳಿಸಿದರು.

ಸಿಲಿಂಡರ್‌ನ ರೆಗ್ಯುಲೇಟರ್ ಸಡಿಲಿಕ್ಕೆ ಮತ್ತು ಪೈಪ್ ಲಿಕೇಜ ಆಗಿರುವುದೇ ಸ್ಫೋಟಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಕೋಣೆಯಲ್ಲಿರುವ ಅಕ್ಕಿ,ಬೇಳೆ, ಹಾಲಿನ ಪೌಡರ್, ಪಾತ್ರೆಗಳು ಒಡೆದು ಹೋಗಿವೆ.

ಇಷ್ಟೆಲ್ಲ ಘಟನೆ ನಡೆದರು ಇಲಾಖೆಯ ಯಾವೊಬ್ಬ ಅಧಿಕಾರಿ ಇಲ್ಲಿವರೆಗೆ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದಿಲ್ಲ ಎಂಬುದು ದುರದೃಷ್ಟಕರ ಸಂಗತಿ.

Edited By : Abhishek Kamoji
Kshetra Samachara

Kshetra Samachara

26/09/2022 07:35 pm

Cinque Terre

12.98 K

Cinque Terre

0

ಸಂಬಂಧಿತ ಸುದ್ದಿ