ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಡಿಹೊಸಕೋಟೆ ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ವಿದ್ಯುತ್ ತಂತಿ ವೈರ್ ನ್ನ ಗೋರಿಗೆ ಕಟ್ಟಲಾಗಿದೆ ಎಂದು ಇದೇ ತಿಂಗಳು 22 ನೇ ತಾರೀಖಿನಂದು ಪಬ್ಲಿಕ್ ನೆಕ್ಸ್ಟ್ ನಲ್ಲಿ ಸುದ್ದಿ ವರದಿ ಮಾಡಲಾಗಿತ್ತು. ಎಚ್ಚೆತ್ತ ಬೆಸ್ಕಾಂ ಅಧಿಕಾರಿಗಳು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದಲ್ಲದೆ ಗೋರಿಗೆ ಕಟ್ಟಲಾಗಿದ್ದ ವಿದ್ಯುತ್ ತಂತಿಯನ್ನು ತೆರವು ಮಾಡಿ ಪಕ್ಕದಲ್ಲಿ ಹಾಕಿದ್ದಾರೆ ಇದು ಪಬ್ಲಿಕ್ ನೆಕ್ಟ್ಸ್ ನ ಇಂಪ್ಯಾಕ್ಟ್ ಸ್ಟೋರಿ
Kshetra Samachara
25/07/2022 06:56 pm