ಬೆಂಗಳೂರು: ಮಾಂಸಹಾರಿ ಪ್ರಾಣಿಗಳು ಸಾಮಾನ್ಯವಾಗಿ ಸಸ್ಯಹಾರಿ ಪ್ರಾಣಿಗಳನ್ನು ಭೇಟೆಯಾಡಿ ತಿನ್ನುತ್ತವೆ ಎಂಬುದನ್ನು ಕೇಳಿದ್ದೇವೆ, ಓದಿದ್ದೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆಯ ವೀಡಿಯೋ ಮದರ್ಸ್ ಡೇ ದಿನವೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ತಾಯಿ ಹೆಣ್ಣು ಹಂದಿಗಳ ದಾಳಿಯನ್ನು ನೋಡಿದರೆ ನೀವು ಶಾಕ್ ಆಗುತ್ತೀರಿ.
ಇದೇನಪ್ಪ ಇದು ವರಾಹ-ಹಂದಿ ಜಾತಿಗೆ ಸೇರಿದ ಮೂರು ಹೆಣ್ಣು ಕಾಡುಹಂದಿಗಳು ಚಿರತೆಯನ್ನು ಮುಖ-ಮೈ ನೋಡದೇ ಕಚ್ಚಿ ಕಚ್ಚಿ ಕೊಂದಿವೆ. ಬಸ್ ಪ್ರಯಾಣಿಕರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿರೊ ಈ ವೀಡಿಯೋ ಇದೀಗ ಸಖತ್ ಸದ್ದು ಮಾಡ್ತಿದೆ. ಮೂರು ಹೆಣ್ಣು ಹಂದಿಗಳ ದಾಳಿಗೆ ರಸ್ತೆಯಲ್ಲೆ ಚಿರತೆ ಅರಚಿ, ಚೀರಾಡಿ ಪ್ರಾಣಬಿಟ್ಟಿದೆ..
ತಮ್ಮ ಹಂದಿಗೂಡಿನಲ್ಲಿದ್ದ ಮರಿಗಳನ್ನು ಚಿರತೆ ಬೇಟೆಯಾಡಿ ತಿಂದಿರಬಹುದು. ಹಲವು ಮರಿಗಳನ್ನು ಕಳೆದುಕೊಂಡ ತಾಯಿ ಹಂದಿಗಳು ಹಾಲುಣಿಸಲಾರದೇ ನೋವು ಮತ್ತು ಆಕ್ರೋಶದಿಂದ ತಮ್ಮ ಪ್ರಾಣದ ಹಂಗು ತೊರೆದು ಚಿರತೆ ಮೈ, ಕಾಲು, ದೇಹ ಮತ್ತು ಚಿರತೆ ಬಾಯಿ ಮೇಲೆ ಅಟ್ಯಾಕ್ ಮಾಡಿ ಕಚ್ಚಿ ಸಾಯಿಸಿವೆ. ಹತ್ತು ಹದಿನೈದು ಸೆಕೆಂಡ್ ವೀಡಿಯೋ ಮಾತ್ರ ಮೊಬೈಲ್ ನಲ್ಲಿ ಸೆರೆಯಾಗಿದೆ. ಹಾಗಾದರೆ ಚಿರತೆ ಹಂದಿ ಕಾಳಗ ಇನ್ನೆಷ್ಟೊತ್ತು ಪಡೆದಿರಬೇಕು ಯೋಚಿಸಿ. ಹೇಗಾದರೂ ಮಾಡಿ ಹಂದಿಗಳನ್ನು ಓಡಿಸಬೇಕೆಂದು ಬಸ್ ಚಾಲಕ ಎಷ್ಟೇ ಹಾರ್ನ್ ಮಾಡಿದರೂ ಹಂದಿಗಳು ಬಿಟ್ಟು ಹೋಗದೆ ರಸ್ತೆಯಲ್ಲಿ ವಾಹನಗಳಿವೆ, ಜನರಿದ್ದಾರೆ ಎಂಬುದನ್ನ ಲೆಕ್ಕಿಸದೇ ಚಿರತೆಯನ್ನು ಕಚ್ಚಿ ಕಚ್ಚಿ ಸಾಯಿಸಿವೆ. ಹಂದಿಗಳ ಆಕ್ರೋಶಭರಿತ ಅಟ್ಯಾಕ್ ನೋಡಿದರೆ ಚಿರತೆ ಮರಿಗಳನ್ನು ಕೊಂದುಹಾಕಿ ತಿಂದಿರುವುದು ಸ್ಪಷ್ಟವಾಗುತ್ತದೆ..
ತಾಯಿ ತನ್ನ ಪ್ರಾಣಬಿಟ್ಟಾದರೂ ಮರಿಗಳನ್ನು, ಮಕ್ಕಳನ್ನು, ತನ್ನವರನ್ನು ಕಾಪಾಡಿಕೊಳ್ಳುತ್ತದೆ ಎನ್ನುವುದಕ್ಕೆ ಇದಕ್ಕಿಂತ ಬೆಸ್ಟ್ ಎಕ್ಸಾಂಪಲ್ ಮತ್ತೊಂದಿಲ್ಲ.. ನೀವು ಏನಂತೀರಿ..!?
Kshetra Samachara
09/05/2022 12:44 pm