ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರದ ಮಾದರಿಯ ಅಲಂಕಾರದಲ್ಲಿ ಗಣೇಶ ಆಚರಣೆ

ವರದಿ- ಬಲರಾಮ್ ವಿ

ಬೆಂಗಳೂರು: ಮಹದೇವಪುರದ ವರ್ತೂರಿನ ಗಾಂಧಿ ವೃತ್ತದಲ್ಲಿ ಜೈ ಶ್ರೀ ರಾಮ ಯುವಕರ ಸಂಘದ ವತಿಯಿಂದ 31 ನೇ ವರ್ಷದ ಗಣೇಶೋತ್ಸವ ಅಂಗವಾಗಿ ಉತ್ತರಪ್ರದೇಶದ ಅಯೋಧ್ಯೆ ಶ್ರೀರಾಮ ಮಂದಿರ ಮಾದರಿಯ ಸೆಟ್ ನಿರ್ಮಿಸಿ ಶ್ರೀ ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.

ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಮಂಜುನಾಥ ಅವರು ಯುಪಿ ರಾಮ ಮಂದಿರದ ಮಾದರಿಯಲ್ಲಿ ಸೆಟ್ ನಿರ್ಮಿಸಿ ಗಣೇಶ ಉತ್ಸವವನ್ನು ಆಚರಿಸಲಾಗಿದೆ. ಪ್ರತಿ ವರ್ಷವೂ ಒಂದಲ್ಲ ಒಂದು ವಿಶೇಷತೆಯಿಂದ ಆಚರಿಸಲಾಗುತ್ತಿದ್ದು, ಈ ಬಾರಿ ರಾಮ ಮಂದಿರ ಮಾದರಿ ನಿರ್ಮಿಸಲಾಗಿದೆ ಎಂದರು.

ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಕೈಂಕಾರ್ಯಗಳನ್ನು ನಡೆಸಲಾಯಿತು. ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾಧಿಗಳು ಮಿನಿ ರಾಮ ಮಂದಿರ ನೋಡಿ ಕಣ್ತುಂಬಿಕೊಂಡು ಶ್ರೀ ಗಣೇಶನ ಕೃಪೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.

Edited By :
Kshetra Samachara

Kshetra Samachara

09/09/2022 05:34 pm

Cinque Terre

5.29 K

Cinque Terre

0

ಸಂಬಂಧಿತ ಸುದ್ದಿ