ಬೆಂಗಳೂರು: ರಾಜಧಾನಿ ಬೆಂಗ ಳೂರುಲ್ಲಿ ಪಿಒಪಿ ಗಣಪತಿ ಉತ್ಸವ ಸಮಿತಿ ಬ್ಯಾಟಿಂಗ್ ಮಾಡಿದ್ದು, ವಿವಾದಕ್ಕೆ ಕಾರಣ ವಾಗಿದೆ. ನಿಷೇಧಿತ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡು ವಂತೆ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಇಂದು ಆಗ್ರಹಿಸಿದೆ.
ನಗರದಲ್ಲಿ ಪ್ರೆಸ್ ಮೀಟ್ ಮಾಡಿದ ಸಮಿತಿ ಪಿಒಪಿ ಗಣಪತಿ ಕೇವಲ ಪೂಜೆಗೆ ಮಾತ್ರ ಸಿಮೀತ ಮಾಡಬೇಕು. ನೀರಿನಲ್ಲಿ 10 ದಿನ ಇದ್ರೆ ಮಾತ್ರ ಮಾರಕವಾಗುತ್ತದೆ. ವಿಸರ್ಜನೆ ಆದ ತಕ್ಷಣವೇ ನೀರಿ ನಿಂದ ತೆರವು ಮಾಡಿದರೆ ಪರಿಸರಕ್ಕೆ ಮಾರಕವಿಲ್ಲ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು ಸಮಜಾಯಿಷಿ ನೀಡಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಸರ್ಕಾರದಿಂದಲೇ ಮೂರ್ತಿ ತಯಾರಕರಿಗೆ ಮಣ್ಣು, ಬಣ್ಣ ನೀಡುವ ಕೆಲಸ ಆಗಲಿ ಅಂತ ಮನವಿ ಮಾಡಿದೆ.
ಸಮೀತಿ ಬೇಡಿಕೆಗಳು
- ಗಣೇಶೋತ್ಸವದ ಸರ್ಕಾರದ ನಿರ್ಧಾರ ೬೦ ದಿನ ಮುಂಚೆ ತಿಳಿಸಬೇಕು
- ಮೂರ್ತಿ ತಯಾರಕರು, ಮಾರಾಟಗಾರರಿಗೆ ಯಾವುದೇ ತೊಂದರೆ ನೀಡಬಾರದು
- ಗಣೇಶ ಮೂರ್ತಿಯ ಎತ್ತರಕ್ಕೆ ಯಾವುದೇ ನಿರ್ಬಂಧ ಹೇರಬಾರದು
- ಗಣೇಶ ಮೂರ್ತಿ ವಿಸರ್ಜನೆಗೆ ತಾತ್ಕಾಲಿಕ ಹೊಂಡಗಳನ್ನ ನಿರ್ಮಿಸಬೇಕು
- ಏಕಗವಾಕ್ಷಿ ಮೂಲಕ ಆನ್ ಲೈನ್ ವ್ಯವಸ್ಥೆ ರೂಪಿಸಬೇಕು
- ಆಚರಣಾ ಸಮಿತಿಗಳಿಗೆ ಕನಿಷ್ಠ ೫ ವರ್ಷಗಳ ಪರವಾನಗಿ ನೀಡಬೇಕು
- ಉತ್ಸವ ಸಮಿತಿಗಳಿಗೆ ಪೊಲೀಸರ ಕಿರುಕುಳ, ಕೇಸ್ ದಾಖಲು ಆಗದಂತೆ ನೋಡಿಕೊಳ್ಳಬೇಕು
- ಮೆರವಣಿಗೆ ಸಮಯದಲ್ಲಿವಮಾರ್ಗಕ್ಕೆಯಾವುದೇ ಅಡೆತಡೆ ಇರಬಾರದು
- ಕಲ್ಯಾಣಿಗಳಲ್ಲಿ ಮೂರ್ತಿ ವಿಸರ್ಜನೆಗೆ ಯಾವುದೇ ಸಮಯ ನಿಗಧಿ ಮಾಡಬಾರದು
Kshetra Samachara
12/08/2022 02:25 pm